ಗುರುವಾರ , ಸೆಪ್ಟೆಂಬರ್ 16, 2021
29 °C

ವಿಶಿಷ್ಟ ಸೇವಾ ಪದಕ ವಿಜೇತ, ಭಾರತೀಯ ಸೇನೆಯ ಹೆಮ್ಮೆಯ ನೀರಜ್ ಚೋಪ್ರಾ

ಡೆಕ್ಕನ್ ಹೆರಾಲ್ಡ್‌ Updated:

ಅಕ್ಷರ ಗಾತ್ರ : | |

PTI

ಬೆಂಗಳೂರು: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕದ ಮೇರು ಸಾಧಕ ನೀರಜ್‌ ಚೋಪ್ರಾ ಭಾರತೀಯ ಸೈನ್ಯದ ದಕ್ಷಿಣ ಕಮಾಂಡ್‌ ವಿಭಾಗದಲ್ಲಿ ಸುಬೇದಾರ್‌ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

2016ರ ಆಗಸ್ಟ್‌ 26ರಂದು ಭಾರತೀಯ ಸೈನ್ಯದ ನೈಬ್‌ ಸುಬೇದಾರ್‌ ಶ್ರೇಯಾಂಕದ ವಿಭಾಗದಲ್ಲಿ ಕಿರಿಯ ನಿಯುಕ್ತಾಧಿಕಾರಿಯಾಗಿ ಸೇರ್ಪಡೆಗೊಂಡಿದ್ದಾರೆ. ಕರ್ತವ್ಯದಲ್ಲೂ ಸಾಹಸ ಮೆರೆದಿರುವ ನೀರಜ್‌, 2018ರಲ್ಲಿ ಅರ್ಜುನ ಪ್ರಶಸ್ತಿ ಮತ್ತು 2021ರಲ್ಲಿ ವಿಶಿಷ್ಠ ಸೇವಾ ಪದಕವನ್ನು ಪಡೆದಿದ್ದಾರೆ.

ದಕ್ಷಿಣ ಕಮಾಂಡರ್‌ ವಿಭಾಗದ ಸೇನಾ ಕಮಾಂಡರ್‌ ಲೆಫ್ಟಿನೆಂಟ್‌ ಜೆನರಲ್‌ ಜೆ.ಎಸ್‌. ನಾಯ್ನ್‌ ಅವರು ನೀರಜ್‌ ಚೋಪ್ರಾರನ್ನು ಅಭಿನಂದಿಸಿದ್ದಾರೆ. ಭಾರತೀಯ ಸೇನೆಗೆ ಮತ್ತು ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಮೆಚ್ಚುಗೆ ಸಲ್ಲಿಸಿದ್ದಾರೆ.

ಪುಣೆ ಆರ್ಮಿ ಸ್ಪೋರ್ಟ್‌ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತಿ ಪಡೆದಿದ್ದರು ಎಂದು ಸೇನೆ ತಿಳಿಸಿದೆ.

ಒಲಿಂಪಿಕ್ಸ್‌ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದ ನೀರಜ್‌ ಚೋಪ್ರಾ ಹರಿಯಾಣದ ಪಾಣಿಪತ್‌ ಜಿಲ್ಲೆಯ ಖಾಂದ್ರಾ ಗ್ರಾಮದ ಕೃಷಿ ಕುಟುಂಬದಲ್ಲಿ ಜನಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನ ಜಾವೆಲಿನ್‌ ಥ್ರೋದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ನೀರಜ್‌ ಚೋಪ್ರಾ ಇತಿಹಾಸ ನಿರ್ಮಿಸಿದ್ದಾರೆ. 87.58 ಮೀಟರ್‌ ದೂರ ಜಾವೆಲಿನ್‌ ಎಸೆಯುವ ಮೂಲಕ ಚೋಪ್ರಾ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು