ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂಟಿಂಗ್‌: ಮತ್ತೆ ನಿರಾಸೆ- ಭಾರತದ ಶೂಟರ್‌ಗಳು ಗುರಿ ತಪ್ಪಿದರು

Last Updated 25 ಜುಲೈ 2021, 19:07 IST
ಅಕ್ಷರ ಗಾತ್ರ

ಟೋಕಿಯೊ: ಭಾರತದ ಶೂಟರ್‌ಗಳು ಭಾನುವಾರವೂ ಗುರಿ ತಪ್ಪಿದರು.

ಮಹಿಳೆಯರ 10 ಮೀ. ಏರ್‌ ಪಿಸ್ತೂಲ್‌ನಲ್ಲಿ ಪದಕದ ಭರವಸೆ ಮೂಡಿಸಿದ್ದ ಮನು ಭಾಕರ್‌ ನಿರಾಸೆ ಕಂಡರು. ಅರ್ಹತಾ ಸುತ್ತಿನ ಸ್ಪರ್ಧೆಯ ವೇಳೆ ಪಿಸ್ತೂಲ್‌ನ ಕಾಕಿಂಗ್‌ ಲಿವರ್‌ ಮುರಿದಿದ್ದರಿಂದ ಅವರಿಗೆ ಹಿನ್ನಡೆಯಾಯಿತು. ಅವರು 575 ಸ್ಕೋರ್‌ ಗಳಿಸಿದರು. ಕೇವಲ ಎರಡು ಸ್ಕೋರ್‌ ಅಂತರದಿಂದ ಫೈನಲ್‌ ಅರ್ಹತೆ ಕಳೆದುಕೊಂಡರು. ಯಶಸ್ವಿನಿ ಸಿಂಗ್‌ ದೇಸ್ವಾಲ್‌ (574) 13ನೇ ಸ್ಥಾನಕ್ಕೆ ತೃಪ್ತರಾದರು.

ಪುರುಷರ 10 ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ ದೀಪಕ್‌ ಕುಮಾರ್‌ (26) ಮತ್ತು ದಿವ್ಯಾಂಶ್‌ ಸಿಂಗ್‌ ಪನ್ವಾರ್‌ (32ನೇ) ಅರ್ಹತಾ ಹಂತದಲ್ಲೇ ಹೊರಬಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT