ಶನಿವಾರ, ಜನವರಿ 28, 2023
18 °C

35 ಕಿ.ಮೀ. ಕ್ರಮಿಸಿದ ಗುರ್‌ಪ್ರೀತ್‌ಗೆ ಸ್ನಾಯು ಸೆಳೆತ, ಸ್ಪರ್ಧೆಯಿಂದ ನಿರ್ಗಮನ

ಪಿಟಿಐ Updated:

ಅಕ್ಷರ ಗಾತ್ರ : | |

ಸಪ್ಪೊರೊ (ಜಪಾನ್): ಟೋಕಿಯೊ ಒಲಿಂಪಿಕ್ಸ್ 50 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಭಾರತದ ಗುರ್‌ಪ್ರೀತ್ ಸಿಂಗ್, 35 ಕಿ.ಮೀ. ದೂರ ಕ್ರಮಿಸಿದ ವೇಳೆ ಸ್ನಾಯು ಸೆಳೆತಕ್ಕೊಳಗಾಗಿ ಸ್ಪರ್ಧೆಯಿಂದಲೇ ಹಿಂದಕ್ಕೆ ಸರಿದರು.

35 ಕಿ.ಮೀ. ದೂರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಗುರ್‌ಪ್ರೀತ್, ಸ್ನಾಯು ಸೆಳೆತಕ್ಕೊಳಕ್ಕಾಗಿ ಅರ್ಧದಿಂದಲೇ ಸ್ಪರ್ಧೆಯಿಂದ ಹಿಂಜರಿದರು. ಇದರಿಂದಾಗಿ 50 ಕಿ.ಮೀ. ದೂರವನ್ನು ಪೂರ್ಣಗೊಳಿಸಲು ಸಾಧ್ಯವಾಗದೇ ಆಘಾತ ಎದುರಿಸಿದರು.

37 ವರ್ಷದ ಗುರ್‌ಪ್ರೀತ್, 35 ಕಿ.ಮೀ. ದೂರ ಕ್ರಮಿಸಿದಾಗ 51ನೇ ಸ್ಥಾನದಲ್ಲಿದ್ದರು. ಅಲ್ಲದೆ 2 ತಾಸು 55 ನಿಮಿಷ ಹಾಗೂ 19 ಸೆಕೆಂಡುಗಳ ಕಾಲ ಸ್ಪರ್ಧಾ ಕಣದಲ್ಲಿದ್ದರು.

ಇದನ್ನೂ ಓದಿ: 

ಪ್ರತಿಕೂಲ ಹವಾಮಾನ ಪರಿಸ್ಥಿತಿಯು ಗುರ್‌ಪ್ರೀತ್‌ಗೆ ಮುಳುವಾಗಿ ಪರಿಣಮಿಸಿತ್ತು. ಬೆಳಗ್ಗೆ 5.30ರ ಹೊತ್ತಿಗೆ ಸ್ಪರ್ಧೆ ಆರಂಭಿಸಿದಾಗ 25 ಡಿಗ್ರಿ ಇದ್ದಿದ್ದ ತಾಪಮಾನವು 9 ಗಂಟೆಯ ವೇಳೆಗೆ 30 ಡಿಗ್ರಿ ತಲುಪಿತ್ತು.

ಈ ವಿಭಾಗದಲ್ಲಿ ಪೊಲೆಂಡ್‌ನ ಡೇವಿಡ್ ತೊಮಲಗೆ (3:50:08) ಚಿನ್ನ, ಜರ್ಮನಿಯ ಜೊನಾಥನ್ ಹಿಲ್ಬರ್ಟ್‌ಗೆ ಬೆಳ್ಳಿ (3:50:44) ಮತ್ತು ಕೆನಡಾದ ಇವಾನ್ ಡಂಫೆಗೆ (3:50:59) ಕಂಚಿನ ಪದಕ ಒಲಿಯಿತು.

ಈ ಹಿಂದೆ ಫ್ರೆಬ್ರುವರಿ ತಿಂಗಳಲ್ಲಿ ನಡೆದ ರಾಷ್ಟ್ರೀಯ ಓಪನ್ ರೇಸ್ ವಾಕ್ ಚಾಂಪಿಯನ್‌ಶಿಪ್‌ನಲ್ಲಿ 3 ತಾಸು 59 ನಿಮಿಷ 42 ಸೆಕೆಂಡುಗಳಲ್ಲಿ ಗುರಿ ತಲುಪಿದ್ದ ಗುರ್‌ಪ್ರೀತ್ ಚಿನ್ನದ ಪದಕ ಜಯಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು