ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಕಿಯೊ ಒಲಿಂಪಿಕ್ಸ್: ಜಿಮ್ನಾಸ್ಟ್‌, ವಾಲಿಬಾಲ್ ಪಟುವಿಗೆ ಕೋವಿಡ್

Last Updated 19 ಜುಲೈ 2021, 12:15 IST
ಅಕ್ಷರ ಗಾತ್ರ

ಟೋಕಿಯೊ: ಒಲಿಂಪಿಕ್ಸ್‌ನ ಕ್ರೀಡಾಗ್ರಾಮದಲ್ಲಿ ಸೋಮವಾರವೂ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಅಮೆರಿಕದ ಜಿಮ್ನಾಸ್ಟ್ ಮತ್ತು ಜೆಕ್ ಗಣರಾಜ್ಯದ ಬೀಜ್ ವಾಲಿಬಾಲ್ ಪಟುವಿನಲ್ಲಿ ಸೋಂಕು ಇರುವುದು ದೃಢವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟೋಕಿಯೊ ನಗರದ ಇನ್‌ಜೈನಲ್ಲಿರುವ ತಂಡದ ಯುವ ಜಿಮ್ನಾಸ್ಟ್‌ಗೆ ಕೋವಿಡ್‌ ಇದೆ ಎಂದು ತಿಳಿಸಿರುವ ಅಧಿಕಾರಿ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು. ಈ ನಡುವೆ ಅಮೆರಿಕದ ಯುವ ಟೆನಿಸ್ ಆಟಗಾರ್ತಿ ಕೊಕೊ ಗಫ್‌ ಸೋಂಕಿಗೆ ಒಳಗಾಗಿದ್ದು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳದೇ ಇರಲು ನಿರ್ಧರಿಸಿದ್ದಾರೆ.

ಒಲಿಂಪಿಕ್ಸ್ ಸುರಕ್ಷಿತ: ತಜ್ಞರ ಅಭಿಪ್ರಾಯ
ಕೋವಿಡ್ ಪ್ರಕರಣಗಳು ನಿತ್ಯವೂ ವರದಿಯಾಗುತ್ತಿದ್ದರೂ ಒಲಿಂಪಿಕ್ಸ್‌ ನಡೆಯುವ ಸ್ಥಳ ಸುರಕ್ಷಿತ ಎಂದು ಆರೋಗ್ಯ ಕ್ಷೇತ್ರದ ತಜ್ಞ ಬ್ರಯಾನ್ ಮೆಕ್‌ಲೊಸ್ಕಿ ಅಭಿಪ್ರಾಯಪಟ್ಟಿದ್ದಾರೆ.

‌‘ಸದ್ಯ ವರದಿಯಾಗುತ್ತಿರುವ ಪ್ರಕರಣಗಳು ನಿರೀಕ್ಷಿತ. ಪ್ರಕರಣಗಳನ್ನು ಆದಷ್ಟು ತಹಬದಿಗೆ ತರುವುದಕ್ಕಾಗಿ ನಿತ್ಯವೂ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದರಿಂದ ಸೋಂಕು ಬೇಗನೇ ಪತ್ತೆಯಾಗುತ್ತಿದ್ದು ಇತರ ಕ್ರೀಡಾಪಟುಗಳಿಂದ ಅವರನ್ನು ದೂರ ಇರಿಸಲು ಸಾಧ್ಯವಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

ಸ್ಥಳೀಯ ಪತ್ರಿಕೆಯೊಂದು ನಡೆಸಿದ ಸಮೀಕ್ಷೆಯಲ್ಲಿ 68 ಶೇಕಡಾ ಮಂದಿ ಒಲಿಂಪಿಕ್ಸ್ ಸುರಕ್ಷಿತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT