ಸೋಮವಾರ, ಸೆಪ್ಟೆಂಬರ್ 27, 2021
21 °C

Tokyo Olympics: ಜರ್ಮನಿಗೆ ಶರಣಾದ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಸಿಕ್ಕ ಅವಕಾಶಗಳನ್ನು ಸುಲಭವಾಗಿ ಕೈಚೆಲ್ಲಿದ ಭಾರತದ ಮಹಿಳಾ ಹಾಕಿ ತಂಡದವರು ಟೋಕಿಯೊ ಕೂಟದಲ್ಲಿ ಮತ್ತೆ ನಿರಾಸೆ ಕಂಡರು.

ಒಯಿ ಹಾಕಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ‘ಎ’ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ರಾಣಿ ರಾಂಪಾಲ್‌ ಬಳಗ 0–2 ಗೋಲುಗಳಿಂದ ಜರ್ಮನಿ ಎದುರು ಪರಾಭವಗೊಂಡಿತು. ಮೊದಲ ಪಂದ್ಯದಲ್ಲಿ ತಂಡವು 1–5 ಗೋಲುಗಳಿಂದ ನೆದರ್ಲೆಂಡ್ಸ್‌ಗೆ ಶರಣಾಗಿತ್ತು.

ರಾಣಿ ಪ‍ಡೆಗೆ ಈ ಪಂದ್ಯದಲ್ಲಿ ಅದೃಷ್ಟ ಕೈಹಿಡಿಯಲಿಲ್ಲ. ಸಿಕ್ಕ ಅವಕಾಶಗಳನ್ನು ಗೋಲಾಗಿ ಪರಿವರ್ತಿಸಲು ಆಟಗಾರ್ತಿಯರು ವಿಫಲರಾದರು. ಮೂರನೇ ಕ್ವಾರ್ಟರ್‌ನಲ್ಲಿ ಲಭಿಸಿದ ಪೆನಾಲ್ಟಿ ಸ್ಟ್ರೋಕ್‌ ಅವಕಾಶವನ್ನು ಗುರ್ಜಿತ್‌ ಕೌರ್‌ ಹಾಳು ಮಾಡಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 3ನೇ ಸ್ಥಾನದಲ್ಲಿರುವ ಜರ್ಮನಿಗೆ ಮೊದಲ ಕ್ವಾರ್ಟರ್‌ನ ಆರಂಭದಲ್ಲಿ ಪ್ರಬಲ ಪ್ರತಿರೋಧ ಎದುರಾಯಿತು. ಹೀಗಿದ್ದರೂ ಎದುರಾಳಿ ತಂಡದ ನಾಯಕಿ ನೈಕಿ ಲೊರೆಂಜ್‌ 12ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. 35ನೇ ನಿಮಿಷದಲ್ಲಿ ಆ್ಯನಾ ಶ್ರೋಡರ್‌ ಗೋಲು ಬಾರಿಸಿ ತಂಡದ ಗೆಲುವನ್ನು ಖಾತ್ರಿ ಪಡಿಸಿದರು. ಭಾರತದ ಗೋಲ್‌ಕೀಪರ್‌ ಸವಿತಾ, ಬ್ರಿಟನ್‌ ಆಟಗಾರ್ತಿಯರ ಅನೇಕ ಪ್ರಯತ್ನಗಳನ್ನು ವಿಫಲಗೊಳಿಸಿ ಗಮನಸೆಳೆದರು.

ತನ್ನ ಮೂರನೇ ಪಂದ್ಯದಲ್ಲಿ ಭಾರತವು ಬ್ರಿಟನ್‌ ಎದುರು ಸೆಣಸಲಿದೆ. ಈ ಹೋರಾಟ ಬುಧವಾರ ನಿಗದಿಯಾಗಿದೆ.    

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು