ಟೋಕಿಯೊ:ಆಸ್ಟ್ರೇಲಿಯಾದ ಆ್ಯಂಡ್ರ್ಯೂ ಹೊಯ್ 50 ವರ್ಷಗಳಲ್ಲಿ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಅತಿ ಹಿರಿಯ ಕ್ರೀಡಾಪಟು ಎನಿಸಿಕೊಂಡರು. ಸೋಮವಾರ ನಡೆದ ಈಕ್ವೆಸ್ಟ್ರಿಯನ್ ಈವೆಂಟಿಂಗ್ ತಂಡ ಸ್ಪರ್ಧೆಯಲ್ಲಿ ಕಂಚು ಗಳಿಸುವುದರೊಂದಿಗೆ ಅವರು ಈ ಸಾಧನೆ ಮಾಡಿದರು. ಅವರಿಗೆ ಈಗ 62 ವರ್ಷ ವಯಸ್ಸು.
ಆ್ಯಂಡ್ರ್ಯೂ ಹೊಯ್ ಒಲಿಂಪಿಕ್ಸ್‌ನಲ್ಲಿ ಈ ಹಿಂದೆ ನಾಲ್ಕು ಪದಕ ಗೆದ್ದಿದ್ದರು. ಆ ನಾಲ್ಕೂ ಚಿನ್ನದ ಪದಕವಾಗಿತ್ತು. ಆದರೆ 2000ನೇ ಇಸವಿಯ ಒಲಿಂಪಿಕ್ಸ್ ನಂತರ ಗಳಿಸಿದ ಮೊದಲ ಪದಕವಾಗಿತ್ತು ಇದು. ಮೆಕ್ಸಿಕೊದಲ್ಲಿ 1968ರಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗಳಿಸಿದ ಸ್ವಿಟ್ಜರ್ಲೆಂಡ್‌ನ ಲೂಯಿಜ್ ನೊವೆರಾಜ್ ಪದಕ ಗೆದ್ದ ಅತಿ ಹಿರಿಯ ಅಥ್ಲೀಟ್ ಆಗಿದ್ದರು. ಆಗ ಅವರಿಗೆ 66 ವರ್ಷವಾಗಿತ್ತು.
ಫವಾದ್ ಮಿರ್ಜಾಗೆ 23ನೇ ಸ್ಥಾನ: ಭಾರತದ ಫವಾದ್ ಮಿರ್ಜಾ ವೈಯಕ್ತಿಕ ಜಂಪಿಂಗ್ ವಿಭಾಗದಲ್ಲಿ ಫೈನಲ್ ತಲುಪಿದ ಭಾರತದ ಮೊದಲ ಸವಾರ ಎನಿಸಿಕೊಂಡರು. ಆದರೆ ಫೈನಲ್‌ನಲ್ಲಿ 23ನೇ ಸ್ಥಾನಕ್ಕೆ ಕುಸಿದರು. ಅರ್ಹತಾ ಸುತ್ತಿನಲ್ಲಿ 25ನೇ ಸ್ಥಾನ ಗಳಿಸಿದ್ದ ಬೆಂಗಳೂರಿನ ಫವಾದ್ ಫೈನಲ್‌ನಲ್ಲಿ ಅದೇ ಸಾಮರ್ಥ್ಯವನ್ನು ಮುಂದುವರಿಸುವಲ್ಲಿ ವಿಫಲರಾದರು.
ಜರ್ಮನಿಯ ಜೂಲಿಯಾ ಕ್ರಾಜೆವ್‌ಸ್ಕಿ ಚಿನ್ನ ಮತ್ತು ಬ್ರಿಟನ್ ಟಾಮ್ ಮೆಕ್‌ವೆನ್ ಬೆಳ್ಳಿ ಗೆದ್ದರು.
ಫೈನಲ್‌ಗೆ ಅರ್ಹತೆ ಪಡೆಯಲು ಅಗ್ರ 25ರೊಳಗೆ ಸ್ಥಾನ ಪಡೆಯಬೇಕಿತ್ತು. ತಮ್ಮ ನೆಚ್ಚಿನ ಸಿನೊರ್ ಮೆಡಿಕಾಟ್ ಕುದುರೆಯೊಂದಿಗೆ ಮುನ್ನುಗ್ಗಿದ ಫವಾದ್ ಎರಡು ತಡೆಗಳನ್ನು ದಾಟಿದರು. ಜಂಪಿಂಗ್ ಸುತ್ತಿನಲ್ಲಿಅವರಿಗೆ ಎಂಟು ಪೆನಾಲ್ಟಿ ಪಾಯಿಂಟ್ಸ್ ನೀಡಲಾಯಿತು. ಒಟ್ಟು 47.2 ಪೆನಾಲ್ಟಿ ಪಾಯಿಂಟ್ಸ್ ಪಡೆದ ಅವರು 25ನೇ ಸ್ಥಾನ ಗಳಿಸುವಲ್ಲಿ ಯಶಸ್ವಿಯಾದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.