ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಹಾಕಿ ಪಾಲಿಗೆ ಕಂಚಿನ ಪದಕ ʼಟರ್ನಿಂಗ್ ಪಾಯಿಂಟ್ʼ: ವಿರೇನ್ ರಸ್ಕಿನ್‌

Last Updated 5 ಆಗಸ್ಟ್ 2021, 14:45 IST
ಅಕ್ಷರ ಗಾತ್ರ

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಪುರುಷರ ಹಾಕಿ ತಂಡವು ಕಂಚಿನ ಪದಕ ಗೆದ್ದಿರುವುದು ದೇಶದಲ್ಲಿ ಹಾಕಿ ಆಟದ ಪಾಲಿಗೆ ಟರ್ನಿಂಗ್‌ ಪಾಯಿಂಟ್‌ (ಮಹತ್ವದ ತಿರುವು) ಆಗಲಿದೆ ಎಂದುಮಾಜಿ ನಾಯಕ ವಿರೇನ್‌ ರಸ್ಕಿನ್‌ ಅವರು ಹೇಳಿದ್ದಾರೆ.

ಭಾರತ ತಂಡವು ಬರೋಬ್ಬರಿ41 ವರ್ಷಗಳ ಬಳಿಕ ಒಲಿಂಪಿಕ್ಸ್‌ ಕ್ರೀಡೆಗಳಲ್ಲಿ ಪದಕ ಗೆದ್ದ ಸಾಧನೆ ಮಾಡಿದೆ. ಸೆಮಿಫೈನಲ್‌ನಲ್ಲಿಬೆಲ್ಜಿಯಂ ಎದುರು ಸೋತು ಫೈನಲ್‌ ತಲುಪುವಲ್ಲಿ ವಿಫಲವಾಗಿದ್ದಟೀಂ ಇಂಡಿಯಾ, ಬಳಿಕ ಜರ್ಮನಿ ಪಡೆಯನ್ನು5-4 ಅಂತರದಿಂದ ಮಣಿಸಿ ಕಂಚಿನ ಪದಕಕ್ಕೆ ಮುತ್ತಿಕ್ಕಿದೆ.

ಈ ಬಗ್ಗೆ ಮಾತನಾಡಿರುವ ರಸ್ಕಿನ್‌, ʼಭಾರತದ ಹಾಕಿ ಪಾಲಿಗೆ ಇದು ಮಹತ್ವದ ಸಾಧನೆ ಎಂದು ನಾನು ಭಾವಿಸುತ್ತೇನೆ. ಇದಕ್ಕಾಗಿ ನಾವು41 ವರ್ಷಗಳಿಂದ ಕಾಯುತ್ತಿದ್ದೆವು.1980ರ ಮಾಸ್ಕೊ ಒಲಿಂಪಿಕ್ಸ್‌ನಿಂದ ಈವರೆಗೆ ಹಲವು ತಲೆಮಾರಿನ ಆಟಗಾರರು ಫೈನಲ್‌ ತಲುಪಲು ತಮ್ಮಿಂದ ಸಾಧ್ಯವಾದಷ್ಟು ಪ್ರಯತ್ನ ಮಾಡಿದ್ದರು. ಆದರೆ, ಯಶಸ್ವಿಯಾಗಿರಲಿಲ್ಲ. ಈ ಬಾರಿಯ ತಂಡ ಕಂಚಿನ ಪದಕ ಗೆದ್ದಿರುವುದು ನಂಬಲಸಾಧ್ಯವಾದ ಸಾಧನೆಯಾಗಿದೆʼ

ʼಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವುದು ಪದಕ ಗೆಲ್ಲುವುದು ಭಾರತದ ಪ್ರತಿಯೊಬ್ಬ ಹಾಕಿ ಆಟಗಾರನ ಕನಸು. ನನ್ನ ಪ್ರಕಾರ ಇದುಭಾರತದ ಹಾಕಿಗೆ ಟರ್ನಿಂಗ್‌ ಪಾಯಿಂಟ್‌ ಆಗಲಿದೆʼ ಎಂದು ಹೇಳಿದ್ದಾರೆ.

ʼಖಂಡಿತಾ, ಈ ಹಂತದಲ್ಲಿ ಯಾವುದೇ ಪದಕ ಗೆಲ್ಲುವುದು ಶ್ರೇಷ್ಠ ಸಾಧನೆ. ಇವತ್ತಿಗೂ ನಾವು ಪದಕಕ್ಕಾಗಿ ಜರ್ಮನಿಯಂತಹ ಪ್ರಬಲತಂಡದ ವಿರುದ್ಧ ಆಡಬೇಕಾಯಿತು.1-3 ಅಂತರದಿಂದ ಹಿಂದಿದ್ದರೂ ಪುಟಿದೆದ್ದು ಆಡಿದ ತಂಡಕ್ಕೆ ಪೂರ್ಣ ಶ್ರೇಯ ಸಲ್ಲಬೇಕು.‌ ಕೋಚ್‌ ಗ್ರಹಾಂ ರೀಯಾದ್‌ ಮತ್ತು ಪೂರ್ಣ ತರಬೇತಿ ಸಿಬ್ಬಂದಿ ಉತ್ತಮ ಕೆಲಸ ಮಾಡಿದ್ದಾರೆ. ಮನ್‌ಪ್ರೀತ್‌ ಸಿಂಗ್‌ ಮತ್ತು ಪಿ.ಆರ್.‌ ಶ್ರೀಜೇಶ್‌ ಅವರಂಥ ಹಿರಿಯ ಆಟಗಾರರೂ ತಮ್ಮ ಪಾತ್ರ ನಿಭಾಯಿಸಿದ್ದಾರೆʼ ಎಂದು ಶ್ಲಾಘಿಸಿದ್ದಾರೆ.

ಇವನ್ನೂ ಓದಿ
*

​*
​*
​*
​*
​*
​*
​*
​*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT