ಟೋಕಿಯೊ: ತಮಗಿಂತಲೂ ಕೆಳಗಿನ ರ‍್ಯಾಂಕಿಂಗ್ ಸ್ಪರ್ಧಿಯಿಂದ ಅಚ್ಚರಿಯ ಸೋಲಿನ ಆಘಾತ ಎದುರಿಸಿರುವ ಭಾರತದ ಟೇಬಲ್ ಟೆನಿಸ್ ಪಟು ಜಿ. ಸತ್ಯನ್, ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹೊರಬಿದ್ದಿದ್ದಾರೆ.
ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ವಿಶ್ವ ನಂ. 38 ರ‍್ಯಾಂಕ್‌ನ ಸತ್ಯನ್, ಹಾಂಕಾಂಗ್‌ನ ಸು ಹ್ಯಾಂಗ್ ವಿರುದ್ಧ 3-4ರ ಅಂತರದಲ್ಲಿ ಸೋಲು ಅನುಭವಿಸಿದರು.
ಕ್ರೀಡಾಕೂಟದಲ್ಲಿ 26ನೇ ಶ್ರೇಯಾಂಕಿತ ಸತ್ಯನ್ ಅವರ ಬಳಿ ವಿಶ್ವದ 95ನೇ ರ‍್ಯಾಂಕ್ ಆಟಗಾರನ ಅನಿರೀಕ್ಷಿತ ಹೊಡೆತಗಳಿಗೆ ಉತ್ತರವೇ ಇರಲಿಲ್ಲ.
ಟೋಕಿಯೊ ಒಲಂಪಿಕ್ಸ್‌ನಲ್ಲಿ ಜಿ. ಸತ್ಯನ್ ಭಾರತದ ಭರವಸೆಯಾಗಿದ್ದರು. ಆದರೆ ಪುರುಷ ಸಿಂಗಲ್ಸ್ ವಿಭಾಗದಲ್ಲಿ ನಿರೀಕ್ಷೆ ತಲುಪುವಲ್ಲಿ ವಿಫಲರಾಗಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.