ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದೀಪನ ಮದ್ದು ಸೇವಿಸಿದ ಟರ್ಕಿ ಅಥ್ಲೀಟ್‌ ಗುಲ್ಸನ್

Last Updated 29 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಪ್ಯಾರಿಸ್: ಟರ್ಕಿಯ ಮೂರುಸಾವಿರ ಮೀಟರ್ಸ್ ಸ್ಟೀಪಲ್ ಚೇಸ್ ಪರಿಣಿತೆ ಗುಲ್ಸನ್ ಮಿಂಗಿರ್ ಉದ್ದೀಪನ ಮದ್ದು ಸೇವಿಸಿರುವುದು ಸಾಬೀತಾಗಿದೆ. ಹೀಗಾಗಿ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಅಮಾನ್ಯ ಮಾಡಲಾಗಿದೆ.

30 ವರ್ಷದ ಮಿಂಗಿರ್ ಮಹಿಳೆಯರ ಸ್ಟೀಪಲ್ ಚೇಸ್‌ನಲ್ಲಿ 27ನೇ ಸ್ಥಾನ ಗಳಿಸಿದ್ದರು. ಈಗ ಅವರ ಫಲಿತಾಂಶವನ್ನು ಅಳಿಸಿ ಹಾಕಲಾಗಿದೆ.

’ಲಂಡನ್ ಒಲಿಂಪಿಕ್ಸ್ ಸಂದರ್ಭದಲ್ಲಿ ಸಂಗ್ರಹಿಸಿದ ಮಾದರಿಯನ್ನು ಮರು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ, ಅವರು ನಿಷೇಧಿತ ಡಿಹೈಡ್ರೊಕ್ಲೋರ್‌ಮೆಥಿಲ್ ಟೆಸ್ಟೊಸ್ಟೆರೊನ್ (ತುರಾಬಿನಾಲ್) ಸೇವಿಸಿದ್ದು ಸಾಬೀತಾಗಿದೆ’ ಎಂದು ಅಂತರರರಾಷ್ಟ್ರೀಯ ಒಲಿಂಪಿಕ್ ಸಮಿತಿ ತಿಳಿಸಿದೆ.

2012ರಲ್ಲಿ ಹೆಲ್ಸಿಂಕಿಯಲ್ಲಿ ನಡೆದಿದ್ದ ಯುರೋಪಿಯನ್ ಚಾಂಪಿಯನ್‌ಷಿಪ್‌ನಲ್ಲಿ ಮಿಂಗಿರ್ ಚಿನ್ನದ ಪದಕ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT