ಭಾರತಕ್ಕೆ ಮೈಕ್‌ ಟೈಸನ್‌

7

ಭಾರತಕ್ಕೆ ಮೈಕ್‌ ಟೈಸನ್‌

Published:
Updated:
Deccan Herald

ಮುಂಬೈ: ವಿಶ್ವ ಬಾಕ್ಸಿಂಗ್‌ ರಂಗದ ದಿಗ್ಗಜ, ಅಮೆರಿಕದ ಮೈಕ್‌ ಟೈಸನ್‌ ಅವರು ಮುಂದಿನ ತಿಂಗಳು ಭಾರತಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಕುಮಿಟೆ 1 ಎಂಬ ಹೆಸರಿನ ಅಂತರರಾಷ್ಟ್ರೀಯ ಮಾರ್ಷಿಯಲ್‌ ಆರ್ಟ್ಸ್‌ ಲೀಗ್‌ಗೆ ಚಾಲನೆ ನೀಡುವ ಕಾರ್ಯಕ್ರಮಕ್ಕಾಗಿ ಅವರು ಇಲ್ಲಿಗೆ ಬರಲಿದ್ದಾರೆ. ಇದನ್ನು ಸೆಪ್ಟೆಂಬರ್‌ 29ರಂದು ಆಯೋಜಿಸಲಾಗಿದೆ. ಅಖಿಲ ಭಾರತೀಯ ಮಿಶ್ರ ಸಮರ ಕಲೆ ಸಂಸ್ಥೆಯು ಈ ಲೀಗ್‌ಗೆ ಬೆಂಬಲ ಸೂಚಿಸಿದೆ.

ಇದರಲ್ಲಿ ಸ್ಪರ್ಧಿಸುತ್ತಿರುವ ಭಾರತ ತಂಡವು ತನ್ನ ಮೊದಲ ಸುತ್ತಿನಲ್ಲಿ ಯುಎಇ ವಿರುದ್ಧ ಸೆಣಸಲಿದೆ. 

‘ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿದ್ದೇನೆ. ಕುಮಿಟೆ 1 ಲೀಗ್‌ನ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದಕ್ಕೆ ಸಂತಸವಾಗುತ್ತಿದೆ. ಭಾರತದಲ್ಲಿನ ನನ್ನ ಅಭಿಮಾನಿಗಳನ್ನು ಕಾಣಲು ಉತ್ಸುಕವಾಗಿದ್ದೇನೆ’ ಎಂದು ಮೈಕ್‌ ಟೈಸನ್‌ ಹೇಳಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !