ಭಾನುವಾರ, ಡಿಸೆಂಬರ್ 8, 2019
21 °C

ಪ್ರೊ ಕಬಡ್ಡಿ: ಮಿಂಚಿದ ಸಿದ್ಧಾರ್ಥ್ ದೇಸಾಯಿ

Published:
Updated:
Deccan Herald

ನವದೆಹಲಿ: ಯು ಮುಂಬಾ ತಂಡವು ಪ್ರೊ ಕಬಡ್ಡಿ ಲೀಗ್‌ ಟೂರ್ನಿಯಲ್ಲಿ ಶನಿವಾರ ಜಯದ ಹಾದಿಗೆ ಮರಳಿತು. ಇಲ್ಲಿಯ ತ್ಯಾಗರಾಜ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಮುಂಬಾ ತಂಡವು 41–34ರಿಂದ ಆತಿಥೇಯ ದಬಂಗ್ ಡೆಲ್ಲಿ ತಂಡವನ್ನು ಮಣಿಸಿತು.

ಮುಂಬಾ ತಂಡದ ಸಿದ್ಧಾರ್ಥ್‌ ದೇಸಾಯಿ ಭರ್ಜರಿ ಬೇಟೆಯಾಡಿದರು. ಅವರು ರೇಡಿಂಗ್‌ನಲ್ಲಿ 15 ಮತ್ತು ನಾಲ್ಕು ಬೋನಸ್‌ ಪಾಯಿಂಟ್‌ಗಳನ್ನು ಗಳಿಸಿ ಮಿಂಚಿದರು. ಇದರಿಂದಾಗಿ ಮುಂಬಾ ತಂಡವು ಪಾರಮ್ಯ ಸಾಧಿಸಲು ಸಾಧ್ಯವಾಯಿತು. ರೋಹಿತ್ ಬಲಿಯಾನ್  ಆಲ್‌ರೌಂಡ್ ಆಟವಾಡಿದರು.

ರೇಡಿಂಗ್‌ನಲ್ಲಿ ಎರಡು, ಟ್ಯಾಕಲ್‌ನಲ್ಲಿ ಒಂದು ಮತ್ತು ಬೋನಸ್‌ನಲ್ಲಿ ಎರಡು ಪಾಯಿಂಟ್‌ಗಳನ್ನು ಹೆಕ್ಕಿ ತಂದರು. ವಿನೋದ್ ಕುಮಾರ್ ರೇಡಿಂಗ್ ಒಂದು ಮತ್ತು ಮೂರು ಬೋನಸ್ ಪಾಯಿಂಟ್ಸ್‌ ಗಳಿಸಿದರು. ಟ್ಯಾಕಲ್‌ನಲ್ಲಿ ಫಜಲ್ ಅತ್ರಾಚಲಿ ಮತ್ತು ಸುರಿಂದರ್ ಸಿಂಗ್ ಅವರು ತಲಾ ಮೂರು ಪಾಯಿಂಟ್‌ಗಳ ಕಾಣಿಕೆ ನೀಡಿದರು.

ತಿರುಗೇಟು ನೀಡುವ ಪ್ರಯತ್ನ ಮಾಡಿದ ದಬಂಗ್ ತಂಡದ ನವೀನ್ ಕುಮಾರ ರೇಡಿಂಗ್‌ನಲ್ಲಿ ಒಂಬತ್ತು ಮತ್ತು ಮೂರು ಬೋನಸ್ ಪಾಯಿಂಟ್‌ಗಳನ್ನು ಗಳಿಸಿದರು.  ಚಂದ್ರನ್  ರಂಜೀತ್ ಏಳು ಪಾಯಿಂಟ್‌ಗಳನ್ನು ಗಳಿಸಿದರು.

ಯು ಮುಂಬಾ ತಂಡದ ಸಿದ್ಧಾರ್ಥ್ ದೇಸಾಯಿ ಉತ್ತಮ ರೇಡರ್, ಫಜಲ್ ಅತ್ರಾಚಲಿ ಉತ್ತಮ ಡಿಫೆಂಡರ್ ಗೌರವ ಗಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು