ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಬರ್ ಕಪ್ ಬ್ಯಾಡ್ಮಿಂಟನ್: ಎಂಟರ ಘಟ್ಟಕ್ಕೆ ಭಾರತ

Last Updated 10 ಮೇ 2022, 14:10 IST
ಅಕ್ಷರ ಗಾತ್ರ

ಬ್ಯಾಂಕಾಕ್‌: ಪಿ.ವಿ. ಸಿಂಧು ನೇತೃತ್ವದ ಭಾರತ ಮಹಿಳಾ ತಂಡವು ಊಬರ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಅಮೆರಿಕವವನ್ನು ಮಣಿಸಿ ಕ್ವಾರ್ಟರ್‌ಫೈನಲ್ ತಲುಪಿದೆ.

ಇಲ್ಲಿ ನಡೆಯುತ್ತಿರುವ ಟೂರ್ನಿಯ ಡಿ ಗುಂಪಿನ ಪಂದ್ಯದಲ್ಲಿ ಮಂಗಳವಾರ ಭಾರತ 4–1ರಿಂದ ಎದುರಾಳಿ ವಿರುದ್ಧ ಜಯಿಸಿತು. ಮೊದಲ ಪಂದ್ಯದಲ್ಲಿ ಕೆನಡಾ ತಂಡವನ್ನು ಸೋಲಿಸಿದ್ದ ಭಾರತದ ಆಟಗಾರ್ತಿಯರು, ಗುಂಪಿನ ಅಗ್ರ ಎರಡು ತಂಡಗಳಲ್ಲಿ ಸ್ಥಾನ ಖಚಿತಪಡಿಸಿದರು.

ಅಮೆರಿಕದ ವಿರುದ್ಧ ಮೊದಲ ಸಿಂಗಲ್ಸ್ ಹಣಾಹಣಿಯಲ್ಲಿ ಸಿಂಧು 21–10, 21–11ರಿಂದ ಜೆನ್ನಿ ಗೈ ಅವರನ್ನು ಪರಾಭವಗೊಳಿಸಿದರು. ಡಬಲ್ಸ್ ವಿಭಾಗದಲ್ಲಿ ತನಿಶಾ ಕ್ರಾಸ್ತೊ–ತ್ರೀಶಾ ಜೋಲಿ21-19, 21-10ರಿಂದ ಫ್ರಾನ್ಸೆಸ್ಕಾ ಕಾರ್ಬೆಟ್‌ ಮತ್ತು ಅಲಿಸನ್ ಲೀ ಅವರನ್ನು ಸೋಲಿಸಿದರು.

ಎರಡನೇ ಸಿಂಗಲ್ಸ್ ಪಂದ್ಯದಲ್ಲಿ ಆಕರ್ಷಿ ಕಶ್ಯಪ್ ಮಿನುಗಿದರು. ಈಸ್ತರ್ ಶಿ ಎದುರು 21–18, 21–11ರಿಂದ ಜಯ ಸಾಧಿಸಿದ ಅವರು ಭಾರತಕ್ಕೆ 3–0 ಮುನ್ನಡೆ ತಂದುಕೊಟ್ಟರು. ಮತ್ತೊಂ‌ದು ಡಬಲ್ಸ್ ಪಂದ್ಯದಲ್ಲಿ ತೀವ್ರ ಪೈಪೋಟಿಯ ಮಧ್ಯೆಯೂ ಸಿಮ್ರಾನ್ ಸಿಂಘಿ– ರಿತಿಕಾ ಥಕ್ಕರ್ ಜೋಡಿಯು 12–21, 21–17, 13–21ರಿಂದ ಲಾರೆನ್ ಲ್ಯಾಮ್ ಮತ್ತು ಕೊಡಿ ಥಾಂಗ್‌ ಲೀ ಎದುರು ಸೋತರು.

ಕೊನೆಯ ಸಿಂಗಲ್ಸ್ ಸೆಣಸಾಟದಲ್ಲಿ ಅಸ್ಮಿತಾ ಚಲಿಹಾ 21–18, 21–13ರಿಂದ ನತಾಲಿ ಚಿ ಅವರನ್ನು ಮಣಿಸಿ ಭಾರತದ ಸಂಭ್ರಮ ಹೆಚ್ಚಿಸಿದರು.

ಈ ಹಿಂದಿನ ಆವೃತ್ತಿಗಳಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿರುವ ಭಾರತ ತಂಡವು, ಮುಂದಿನ ಪಂದ್ಯದಲ್ಲಿ ಕೊರಿಯಾ ತಂಡಕ್ಕೆ ಮುಖಾಮುಖಿಯಾಗಲಿದೆ. ಬುಧವಾರ ಈ ಪಂದ್ಯ ನಡೆಯಲಿದೆ.

ಥಾಮಸ್‌ ಕಪ್‌ನಲ್ಲಿ ಭಾರತ ಪುರುಷರ ತಂಡವು ಸೋಮವಾರ ನಾಕೌಟ್‌ ಹಂತ ತಲುಪಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT