ಭಾನುವಾರ, ಅಕ್ಟೋಬರ್ 20, 2019
21 °C

ಒಲಿಂಪಿಕ್‌ ಈಜುಪಟು ಡ್ವೆಯರ್‌ ಅಮಾನತು

Published:
Updated:
Prajavani

ಲಾಸ್‌ ಏಂಜಲೀಸ್‌: ನಿಷೇಧಿತ ಉದ್ದೀಪನಾ ಮದ್ದು ಸೇವಿಸಿದ್ದು ಸಾಬೀತಾಗಿರುವ ಕಾರಣ ಅಮೆರಿಕದ ಈಜುಪಟು ಕಾನರ್‌ ಡ್ವೆಯರ್‌ ಅವರನ್ನು 20 ತಿಂಗಳು ಅಮಾನತು ಮಾಡಲಾಗಿದೆ.

ಅಮೆರಿಕನ್‌ ಆರ್ಬಿಟ್ರೇಷನ್‌ ಅಸೋಸಿಯೇಷನ್‌ನ ತ್ರಿಸದಸ್ಯ ಸಮಿತಿಯು ಶನಿವಾರ ಈ ನಿರ್ಧಾರ ಪ್ರಕಟಿಸಿದೆ.

2018ರ ನವೆಂಬರ್‌ 15, 27 ಮತ್ತು ಡಿಸೆಂಬರ್‌ 20ರಂದು ಕಾನರ್‌ ಅವರಿಂದ ಮೂತ್ರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇವುಗಳಲ್ಲಿ ನಿಷೇಧಿತ ಟೆಸ್ಟೊಸ್ಟೆರಾನ್‌ ಮದ್ದಿನ ಅಂಶ ಪತ್ತೆಯಾಗಿತ್ತು.

ಅಮಾನತು ಶಿಕ್ಷೆ, 2018ರ ಡಿಸೆಂಬರ್‌ 21ರಿಂದಲೇ ಜಾರಿಯಾಗಿದ್ದು ಮುಂದಿನ ವರ್ಷದ ಆಗಸ್ಟ್‌ನಲ್ಲಿ ಅಂತ್ಯವಾಗಲಿದೆ.

ಕಾನರ್‌ ಅವರು 2012ರ ಲಂಡನ್‌ ಮತ್ತು 2016ರ ರಿಯೊ ಒಲಿಂಪಿಕ್‌ ಕ್ರೀಡಾಕೂಟಗಳಲ್ಲಿ 4X200 ಮೀಟರ್ಸ್‌ ಫ್ರೀಸ್ಟೈಲ್‌ ರಿಲೆ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಜಯಿಸಿದ್ದರು. ರಿಯೊ ಕೂಟದ 200 ಮೀಟರ್ಸ್‌ ಫ್ರೀಸ್ಟೈಲ್‌ನಲ್ಲಿ ಕಂಚಿನ ಪದಕವನ್ನೂ ಗೆದ್ದಿದ್ದರು.

Post Comments (+)