ಬುಧವಾರ, ಏಪ್ರಿಲ್ 8, 2020
19 °C

ಗಾಲ್ಫ್‌ ಚಾಂಪಿಯನ್‌ಷಿಪ್| ಗ್ಯಾರಿ ವುಡ್‌ಲ್ಯಾಂಡ್‌ಗೆ ಗಾಲ್ಫ್‌ ಪ್ರಶಸ್ತಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಪೇಬಲ್‌ ಬೀಚ್‌: ಎರಡು ದಿನಗಳ ಆಟದಲ್ಲಿ ಅಗ್ರಸ್ಥಾನದಲ್ಲೇ ಇದ್ದ ಗ್ಯಾರಿ ವುಡ್‌ಲ್ಯಾಂಡ್‌ ಅಂತಿಮ ದಿನವಾದ ಸೋಮವಾರವೂ ಕೌಶಲ ತೋರಿ 119ನೇ ಯು.ಎಸ್‌. ಓಪನ್‌ ಗಾಲ್ಫ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಇದು ಅವರಿಗೆ ಮೊದಲ ಪ್ರಮುಖ ಪ್ರಶಸ್ತಿ.

ಎರಡು ಬಾರಿಯ ಚಾಂಪಿಯನ್‌ ಬ್ರೂಕ್‌ ಕೋಪ್ಕಾ ಅವರ ಹ್ಯಾಟ್ರಿಕ್‌ ಪ್ರಶಸ್ತಿ ಕನಸನ್ನೂ ವುಡ್‌ಲ್ಯಾಂಡ್‌ ಭಗ್ನಗೊಳಿಸಿದರು. ವುಡ್‌ಲ್ಯಾಂಡ್‌ ಅವರಿಗೆ ಪ್ರಶಸ್ತಿ ಹಾದಿಯಲ್ಲಿ ಪೈಪೋಟಿ ನೀಡಿದ್ದ ಕೋಪ್ಕಾ ಸತತ ಮೂರು ವರ್ಷ ಪ್ರಶಸ್ತಿ ಗೆದ್ದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಪಡೆಯುವ ಪ್ರಯತ್ನದಲ್ಲಿದ್ದರು.

ಇಂಗ್ಲೆಂಡ್‌ನ ಜಸ್ಟಿನ್ ರೋಸ್‌, ಅಮೆರಿಕದ ಕ್ಸಾಂಡರ್‌ ಷಾಫಲ್‌, ಚೆಝ್‌ ರೀವಿ ಮತ್ತು ಸ್ಪೇನ್‌ನ ಜಾನ್‌ ರಾಹ್ಮ್‌ ಜೊತೆ ಮೂರನೇ ಸ್ಥಾನ ಹಂಚಿಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು