ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿ: ಸರಿತಾ, ಮನೀಷಾಗೆ ಚಿನ್ನ

ಯುಡಬ್ಲ್ಯುಡಬ್ಲ್ಯು ರ‍್ಯಾಂಕಿಂಗ್‌ ಸರಣಿಯ ಕುಸ್ತಿ
Last Updated 4 ಜೂನ್ 2022, 19:31 IST
ಅಕ್ಷರ ಗಾತ್ರ

ಆಲ್ಮೇಟಿ: ಭಾರತದ ಸರಿತಾ ಮೋರ್ ಮತ್ತು ಮನೀಷಾ ಅವರು ಕಜಕಸ್ತಾನದ ಅಲ್ಮೇಟಿಯಲ್ಲಿ ನಡೆಯುತ್ತಿರುವ ಯುಡಬ್ಲ್ಯುಡಬ್ಲ್ಯು ರ‍್ಯಾಂಕಿಂಗ್‌ ಸರಣಿಯ ಕುಸ್ತಿಯಲ್ಲಿ ಚಿನ್ನದ ಪದಕ ಜಯಿಸಿದರು.

ಶನಿವಾರ ನಡೆದ 59 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಸರಿತಾ, ಅಜರ್‌ಬೈಜಾನ್‌ನ ಝಲಾ ಅಲಿಯೇವಾ ವಿರುದ್ಧ ಗೆಲುವು ಸಾಧಿಸಿದರು. ವಿಶ್ವ ಮತ್ತು ಏಷ್ಯನ್‌ ಚಾಂಪಿಯನ್‌ಷಿಪ್‌ನ ಕಂಚಿನ ಪದಕ ವಿಜೇತೆಗೆ 2022ರ ಋತುವಿನಲ್ಲಿ ಲಭಿಸಿದ ಮೊದಲ ಚಿನ್ನ ಇದಾಗಿದೆ.

ಮನೀಷಾ ಅವರು 65 ಕೆ.ಜಿ.ವಿಭಾಗದ ಫೈನಲ್‌ನಲ್ಲಿ 8–0 ಅಂತರದಲ್ಲಿ ಅಜರ್‌ಬೈಜಾನ್‌ನ ಎಲೈಸ್ ಮನೊಲೋವಾ ಅವರನ್ನು ಮಣಿಸಿದರು. ಭಾರತದ ಕುಸ್ತಿಪಟು ಸೀನಿಯರ್‌ ವಿಭಾಗದಲ್ಲಿ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದು ಇದೇ ಮೊದಲು. ಏಪ್ರಿಲ್‌ನಲ್ಲಿ ನಡೆದಿದ್ದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಅವರ ಕಂಚು ಗೆದ್ದಿದ್ದರು. ಕಣದಲ್ಲಿದ್ದ ಭಾರತದ ಇನ್ನೊಬ್ಬ ಸ್ಪರ್ಧಿ ಬಿಪಾಶಾ 72 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಗೆದ್ದರು. ಅವರು ಫೈನಲ್‌ನಲ್ಲಿ 5–7ರಲ್ಲಿ ಜಮೀಲಾ ಎದುರು ಸೋತರು. ಸುಷ್ಮಾ ಶೋಕೀನ್ 55 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಪಡೆದರು. ಪುರುಷರ ಫ್ರೀಸ್ಟೈಲ್‌ 125 ಕೆ.ಜಿ. ವಿಭಾಗದಲ್ಲಿ ಮೋಹಿತ್‌ ಕಂಚು ಗೆದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT