ಮಂಗಳವಾರ, ಜೂನ್ 28, 2022
24 °C

ಜೂನಿಯರ್ ಹಾಕಿ ತಂಡಕ್ಕೆ ವೈಷ್ಣವಿ ನಾಯಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವೈಷ್ಣವಿ ಫಾಲ್ಕೆ ಅವರನ್ನು ಭಾರತದ 23 ವರ್ಷದೊಳಗಿನ ಮಹಿಳೆಯರ ಹಾಕಿ ತಂಡದ ನಾಯಕಿಯನ್ನಾಗಿ ನೇಮಕ ಮಾಡಲಾಗಿದೆ. 

ಹಾಕಿ ಇಂಡಿಯಾ ಬುಧವಾರ 20 ಆಟಗಾರ್ತಿಯರ ತಂಡವನ್ನು ಪ್ರಕಟಿಸಿದೆ. ಜೂನ್ 19ರಿಂದ 26ರವರೆಗೆ ಡಬ್ಲಿನ್‌ನಲ್ಲಿ ನಡೆಯಲಿರುವ ಐದು ರಾಷ್ಟ್ರಗಳ ಟೂರ್ನಿಯಲ್ಲಿ ಈ ತಂಡವು ಸ್ಪರ್ಧಿಸಲಿದೆ. 

ಭಾರತವು ಜೂನ್ 19ರಂದು ನಡೆಯುವ ಮೊದಲ ಪಂದ್ಯದಲ್ಲಿ ಐರ್ಲೆಂಡ್ ಎದುರು; 20ರಂದು ನೆದರ್ಲೆಂಡ್ಸ್‌, 22ರಂದು ಉಕ್ರೇನ್ ಮತ್ತು 23ರಂದು ಅಮೆರಿಕ ವಿರುದ್ಧ ಆಡಲಿದೆ. 

ಇದೇ ತಂಡವು ಸ್ವಿಟ್ಜರ್‌ಲೆಂಡ್‌ನಲ್ಲಿ  ಜೂನ್ 4 ಮತ್ತು 5ರಂದು ಲಾಸೆನ್‌ನಲ್ಲಿ ನಡೆಯಲಿರುವ ಎಫ್‌ಐಎಚ್ ಹಾಕಿ 5 ಎ ಸೈಡ್‌ನಲ್ಲಿಯೂ ಭಾಗವಹಿಸುವುದು. 

ತಂಡ: ಗೋಲ್‌ಕೀಪರ್ಸ್: ಖುಷ್ಬೂ, ಕುರಂಪು ರಮ್ಯಾ. ಡಿಫೆಂಡರ್ಸ್: ಪ್ರೀತಿ, ಮಮಿತಾ ಒರಂ, ಮಹಿಮಾ ಟೆಟೆ, ನೀಲಂ, ಹೃತಿಕಾ ಸಿಂಗ್. 

ಮಿಡ್‌ಫೀಲ್ಡರ್ಸ್: ವೈಷ್ಣವಿ ವಿಠಲ್ ಫಾಲ್ಕೆ (ನಾಯಕಿ), ಮಂಜು ಚೌರಾಸಿಯಾ, ಜ್ಯೋತಿ ಚೆಟ್ರಿ, ಹೀನಾ ಬಾನೊ, ನಿಖತಾ ಟೊಪೊ, ಅಶ್ವಿನ್ ಕೊಳೆಕರ್, ಋತುಜಾ ಡ್ಯಾಡ್ಸೊ ಪಿಸಾಳ.

ಫಾರ್ವರ್ಡ್: ಮುಮ್ತಾಜ್ ಖಾನ್ (ಉಪನಾಯಕಿ), ಅನು, ಬ್ಯೂಟಿ ಡುಂಗ್‌ಡುಂಗ್‌, ದೀಪಿಕಾ ಸೊರೆಂಗ್, ಮೋನಿಕಾ ದೀಪಿ ಟೊಪೊ, ಮುದುಗುಲಾ ಭವಾನಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.