ರೋಜರ್ಸ್‌ ಕಪ್‌: ಎರಡನೇ ಸುತ್ತಿಗೆ ವೀನಸ್‌

7

ರೋಜರ್ಸ್‌ ಕಪ್‌: ಎರಡನೇ ಸುತ್ತಿಗೆ ವೀನಸ್‌

Published:
Updated:
Deccan Herald

ಮಾಂಟ್ರಿಯಲ್‌ : ಅಮೆರಿಕದ ವೀನಸ್‌ ವಿಲಿಯಮ್ಸ್‌ ಅವರು ಇಲ್ಲಿ ನಡೆಯುತ್ತಿರುವ ರೋಜರ್ಸ್‌ ಕಪ್‌ ಟೆನಿಸ್‌ ಟೂರ್ನಿಯ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. 

ಸೋಮವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ವೀನಸ್‌, 7–5, 6–1ರಿಂದ ಅಮೆರಿಕದವರೇ ಆದ ಕ್ಯಾರೊಲೀನ್‌ ಡೊಲ್‌ಹೈಡ್‌ ಅವರನ್ನು ಮಣಿಸಿದರು. 

ಏಳು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದಿರುವ ಅಮೆರಿಕದ ಆಟಗಾರ್ತಿ ಎರಡನೇ ಸುತ್ತಿನ ಪಂದ್ಯದಲ್ಲಿ ಸೊರಾನಾ ಕ್ರಿಸ್ಟಿಯಾ ಅಥವಾ ಮೊನಿಕಾ ನಿಕುಲೆಸ್ಕು ಅವರನ್ನು ಎದುರಿಸಲಿದ್ದಾರೆ. 

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 14ನೇ ಸ್ಥಾನದಲ್ಲಿರುವ ವೀನಸ್‌, ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಆಟ ಆಡಿದರು. ರೋಜರ್ಸ್‌ ಕಪ್‌ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದ ಕ್ಯಾರೋಲಿನ್‌ ಅವರು ಎದುರಾಳಿಯ ಅಬ್ಬರದ ಆಟದ ಮುಂದೆ ಮಂಕಾದರು.

ಕ್ಯಾರೋಲಿನ್‌ ಅವರು ಮೊದಲ ಸೆಟ್‌ನಲ್ಲಿ ಸ್ವಲ್ಪ ಪ್ರತಿರೋಧ ಒಡ್ಡಿದರು. ಎರಡನೇ ಸೆಟ್‌ನಲ್ಲಿ ವೀನಸ್‌ ಅವರ ಸವಾಲು ಮೀರಲು ಅವರು ವಿಫಲವಾದರು. ದೀರ್ಘ ರ‍್ಯಾಲಿಗಳ ಮೂಲಕ ಎದುರಾಳಿಯನ್ನು ಕಟ್ಟಿಹಾಕಿದ ಅವರು ಒಟ್ಟು 11 ಏಸ್‌ಗಳನ್ನು ಸಿಡಿಸಿದರು. 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !