ಹಿರಿಯ ಅಥ್ಲೆಟಿಕ್‌ ಕೋಚ್‌ ಎನ್‌. ಲಿಂಗಪ್ಪ ನಿಧನ

ಶುಕ್ರವಾರ, ಜೂಲೈ 19, 2019
22 °C

ಹಿರಿಯ ಅಥ್ಲೆಟಿಕ್‌ ಕೋಚ್‌ ಎನ್‌. ಲಿಂಗಪ್ಪ ನಿಧನ

Published:
Updated:
Prajavani

ಬೆಂಗಳೂರು: ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಹಿರಿಯ  ಅಥ್ಲೆಟಿಕ್‌ ಕೋಚ್‌, ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಎನ್‌.ಲಿಂಗಪ್ಪ(95) ಮಂಗಳವಾರ ಸ್ವಗೃಹದಲ್ಲಿ ನಿಧನರಾದರು. ಈ ಕುರಿತು ಅವರ ಕುಟುಂಬದ ಮೂಲಗಳು ಮಾಹಿತಿ ನೀಡಿವೆ.

2014ರಲ್ಲಿ ಅವರಿಗೆ ದ್ರೋಣಾಚಾರ್ಯ ಪುರಸ್ಕಾರ ಸಂದಿದೆ. ಅಶ್ವಿನಿ ನಾಚಪ್ಪ, ವಂದನಾ ರಾವ್‌, ಡಿ. ವೈ. ಬಿರಾದಾರ್‌, ಉದಯ ಪ್ರಭು, ಪಿ.ಸಿ.ಪೊನ್ನಪ್ಪ ಸೇರಿದಂತೆ ಹಲವು ಅಥ್ಲೀಟ್‌ಗಳಿಗೆ ತರಬೇತಿ ನೀಡಿದ ಹಿರಿಮೆ ಲಿಂಗಪ್ಪ ಅವರದು. ಆರಂಭದಲ್ಲಿ 10 ಕಿ.ಮೀ. ನಡಿಗೆ ಸ್ಪರ್ಧಿ ಆಗಿದ್ದ ಅವರು 1954ರಲ್ಲಿ ಮನಿಲಾದಲ್ಲಿ ನಡೆದ ಏಷ್ಯನ್‌ ಗೇಮ್ಸ್‌ ಟೂರ್ನಿಗೆ ಆಯ್ಕೆಯಾಗಿದ್ದರು.

ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ 10 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಅವರು ಬೆಳ್ಳಿ ಪದಕ ಜಯಿಸಿದ್ದರು. ಭಾರತದ ಅಥ್ಲೆಟಿಕ್ಸ್ ತಂಡಕ್ಕೆ ಸಹಾಯಕ ಕೋಚ್‌ ಆಗಿಯೂ ಅವರು ಕಾರ್ಯನಿರ್ವಹಿಸಿದ್ದರು. ರಾಜ್ಯೋತ್ಸವ ಸೇರಿದಂತೆ ಹಲವು ಗೌರವಗಳಿಗೆ ಅವರು ಭಾಜನರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !