ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಕ್ರೀಡಾ ನಿಲಯಕ್ಕೆ ಪ್ರಶಸ್ತಿ

ರಾಜ್ಯ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌: ಎರಡನೇ ದಿನವೂ ಪ್ರಾಬಲ್ಯ
Last Updated 21 ಅಕ್ಟೋಬರ್ 2021, 20:16 IST
ಅಕ್ಷರ ಗಾತ್ರ

ವಿಜಯಪುರ: ಎರಡೂ ದಿನ ಪ್ರಾಬಲ್ಯ ಮೆರೆದ ವಿಜಯಪುರ ಕ್ರೀಡಾನಿಲಯದ ಸೈಕ್ಲಿಸ್ಟ್‌ಗಳು, ಗುರುವಾರ ಇಲ್ಲಿ ಮುಕ್ತಾಯವಾದ 12ನೇ ರಾಜ್ಯ ರಸ್ತೆ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಪಡೆದುಕೊಂಡರು.

ಈ ತಂಡ 42 ಅಂಕಗಳನ್ನು ಗಳಿಸಿದರೆ, 36 ಅಂಕ ಕಲೆಹಾಕಿದ ಬಾಗಲಕೋಟೆ ಜಿಲ್ಲೆ ತಂಡಕ್ಕೆ ರನ್ನರ್ಸ್‌ ಅಪ್‌ ಸ್ಥಾನ ಲಭಿಸಿತು. ನ. 25ರಿಂದ 28ರ ತನಕ ಹರಿಯಾಣದ ಕುರುಕ್ಷೇತ್ರದಲ್ಲಿ ಜರುಗುವ ರಾಷ್ಟ್ರೀಯ ರಸ್ತೆ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ತಂಡವನ್ನು ಇಲ್ಲಿ ಆಯ್ಕೆ ಮಾಡಲಾಗುತ್ತಿದೆ.

ಎರಡನೇ ದಿನದ ಫಲಿತಾಂಶ: ‌ಪುರುಷರ ಹಾಗೂ ಬಾಲಕರ ವಿಭಾಗ:

16 ವರ್ಷದೊಳಗಿನ 15 ಕಿ.ಮೀ ಮಾಸ್ಡ್ ಸ್ಟಾರ್ಟ್: ಚಿರಾಯುಷ್ ಪಟವರ್ಧನ (ಕಾಲ: 22:39.44ಸೆ.)–1, ಕೆ.ಸುರೇಶ ಬಾಬು (ಎರಡೂ ಚಂದರಗಿ ಕ್ರೀಡಾ ಶಾಲೆ; 22:40.30ಸೆ.)–2, ಹನಮಂತ ಮರನೂರ (ಗದಗ ಕ್ರೀಡಾ ನಿಲಯ; 22:44.15ಸೆ.)–3.

18 ವರ್ಷದೊಳಗಿನ 50 ಕಿ.ಮೀ ಮಾಸ್ಡ್ ಸ್ಟಾರ್ಟ್: ಮಲ್ಲಿಕಾರ್ಜುನ ಯಾದವಾಡ (ಬಾಗಲಕೋಟೆ ಜಿಲ್ಲೆ; 56:04.56ಸೆ.)–1, ಮಧು ಕಾಡಾಪುರ (56:25:40ಸೆ.)–2, ಲೋಕೇಶ (ಇಬ್ಬರೂ ಚಂದರಗಿ ಕ್ರೀಡಾ ಶಾಲೆ;56:45.60ಸೆ.)–3.

23 ವರ್ಷದೊಳಗಿನ 80 ಕಿ.ಮೀ ಮಾಸ್ಡ್ ಸ್ಟಾರ್ಟ್: ಗಣೇಶ ಕುಡಿಗನೂರ (ವಿಜಯಪುರ ಜಿಲ್ಲೆ 01:31:06.30ಸೆ.)–1, ಬಸವರಾಜ ಮಡ್ಡಿ (ಬಾಗಲಕೋಟೆ ಜಿಲ್ಲೆ; 01:31:10.42ಸೆ.)–2, ವಿಶ್ವನಾಥ ಗಾಡಾದ (ವಿಜಯಪುರ ಜಿಲ್ಲೆ; 01:31:10.52ಸೆ)–3.

ಪುರುಷರ 80 ಕಿ.ಮೀ ಮಾಸ್ಡ್ ಸ್ಟಾರ್ಟ್: ಸಂತೋಷ ಕುರಣಿ (ವಿಜಯಪುರ ಜಿಲ್ಲೆ; 01:56:01.10ಸೆ.)–1, ಸಚಿನ್ ರಂಜಣಗಿ (ವಿಜಯಪುರ ಜಿಲ್ಲೆ; 01:58:20.10)–2, ಶ್ರೀನಿಧಿ ಉರಲಾ (ಧಾರವಾಡ ಜಿಲ್ಲೆ; 01:58:20.14ಸೆ.)–3.

ಮಹಿಳೆಯರ ಹಾಗೂ ಬಾಲಕಿಯರ ವಿಭಾಗ: 16 ವರ್ಷದೊಳಗಿನವರ 15 ಕಿ.ಮೀ ಮಾಸ್ಡ್ ಸ್ಟಾರ್ಟ್: ನಂದಾ ಚಿಚಖಂಡಿ ( ಬಾಗಲಕೋಟೆ ಜಿಲ್ಲೆ; 19:09.92ಸೆ.)–1, ಶೈಲಾ ನ್ಯಾಮಗೌಡ (ವಿಜಯಪುರ ಜಿಲ್ಲೆ; 19:10.40ಸೆ.)–2 ಪೂಜಾ ಮಠಪತಿ (ಬಾಗಲಕೋಟ ಜಿಲ್ಲೆ; 19:15.60ಸೆ.)–3.

18 ವರ್ಷದೊಳಗಿನ 30 ಕಿ.ಮೀ ಮಾಸ್ಡ್ ಸ್ಟಾರ್ಟ್: ಅಂಕಿತಾ ರಾಠೋಡ (ವಿಜಯಪುರ ಜಿಲ್ಲೆ; 43:38.41)–1, ಚೈತ್ರಾ ಬೋರ್ಜಿ(ಬಾಗಲಕೋಟೆ ಜಿಲ್ಲೆ; 43:40.32ಸೆ.)–2 ನಿವೇದಿತಾ ಕೊಕ್ಕನವರ (ಧಾರವಾಡ ಜಿಲ್ಲೆ; 43:40.56ಸೆ.)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT