ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರ್ಲ್ಸ್ ಅದಮುಗೆ ವಿಜೇಂದರ್ ಸವಾಲು

ಕಾಮನ್‌ವೆಲ್ತ್‌ ಸೂಪರ್‌ ಮಿಡ್ಲವೇಟ್‌ ಚಾಂಪಿಯನ್‌ ಎದುರು ಭಾರತದ ಬಾಕ್ಸರ್‌ ಕಣಕ್ಕೆ
Last Updated 18 ನವೆಂಬರ್ 2019, 19:55 IST
ಅಕ್ಷರ ಗಾತ್ರ

ದುಬೈ: ಭಾರತದ ವೃತ್ತಿಪರ ಬಾಕ್ಸಿಂಗ್‌ ಪಟು ವಿಜೇಂದರ್‌ ಸಿಂಗ್‌ ಅವರು ಇದೇ 22ರಂದು ದುಬೈನಲ್ಲಿ ಚಾರ್ಲ್ಸ್ ಅದಮು ಅವರಿಗೆ ಸವಾಲೊಡ್ಡಲಿದ್ದಾರೆ. ಎರಡು ಬಾರಿ ಕಾಮನ್‌ವೆಲ್ತ್‌ ಸೂಪರ್‌ ಮಿಡ್ಲವೇಟ್‌ ಚಾಂಪಿಯನ್‌ ಆಗಿರುವ ಚಾರ್ಲ್ಸ್‌ ಘಾನಾ ದೇಶದವರು.

ಈ ವರ್ಷದ ಜುಲೈನಲ್ಲಿ ಅಮೆರಿಕ ವೃತ್ತಿಪರ ಬಾಕ್ಸಿಂಗ್‌ಗೆ ಕಾಲಿಟ್ಟಿದ್ದ ವಿಜೇಂದರ್‌, ಮೈಕ್‌ ಸ್ನೈಡರ್‌ ಅವರಿಗೆ ಸೋಲಿನ ಪಂಚ್‌ ನೀಡಿದ್ದರು. ಇದರೊಂದಿಗೆ ಸತತ 11ನೇ ಪಂದ್ಯ ಗೆದ್ದ ಹಿರಿಮೆಗೆ ಪಾತ್ರವಾಗಿದ್ದರು.

42 ವರ್ಷದ ಚಾರ್ಲ್ಸ್ ವಿರುದ್ಧ ವಿಜೇಂದರ್‌ 10 ಸುತ್ತುಗಳ ಬೌಟ್‌ನಲ್ಲಿ ಮುಖಾಮುಖಿಯಾಗಿದ್ದಾರೆ. ಇದುವರೆಗೆ 47 ಬೌಟ್‌ಗಳಲ್ಲಿ ಕಣಕ್ಕಿಳಿದಿರುವ ಚಾರ್ಲ್ಸ್, 33ರಲ್ಲಿ ಜಯ ಹಾಗೂ 14ರಲ್ಲಿ ಸೋಲು ಕಂಡಿದ್ದಾರೆ.

‘ಎರಡು ತಿಂಗಳಿಗಿಂತ ಹೆಚ್ಚು ಕಾಲ ಕಠಿಣ ತರಬೇತಿ ಪಡೆದುಕೊಂಡಿದ್ದು, ವರ್ಷಾಂತ್ಯವನ್ನು ಗೆಲುವಿನೊಂದಿಗೆ ಮುಗಿಸಲು ಸಜ್ಜಾಗಿದ್ದೇನೆ. 2020ರ ವಿಶ್ವ ಚಾಂಪಿಯನ್‌ಷಿಪ್‌ಗೆ ಈ ಹಣಾಹಣಿಯನ್ನು ವೇದಿಕೆಯನ್ನಾಗಿ ಬಳಸಿಕೊಳ್ಳುತ್ತೇನೆ’ ಎಂದು 34 ವರ್ಷದ ವಿಜೇಂದರ್‌ ಹೇಳಿದ್ದಾರೆ.

‘ನನ್ನ ಎಲ್ಲ ಅನುಭವವನ್ನು ಹೋರಾಟದಲ್ಲಿ ಬಳಸಿಕೊಳ್ಳಲಿದ್ದೇನೆ. ವಿಜೇಂದರ್‌ ಮನಸಿನಲ್ಲಿ ಏನಿದೆಯೆಂದು ತಿಳಿದು ಆಡುತ್ತೇನೆ. ನಾನು ಕಣಕ್ಕಿಳಿಯುವ ಎಲ್ಲ ಸೆಣಸಾಟಗಳಿಗೂ ಮುನ್ನ ಎದುರಾಳಿಯ ಬಲಾಬಲ ಅರಿಯಲು ಸಮಯ ವ್ಯಯಿಸುತ್ತೇನೆ. ವಿಜೇಂದರ್‌ ಅವರ ಗೆಲುವಿನ ಸರಣಿ ಕಳಚುವ ವಿಶ್ವಾಸವಿದೆ’ ಎಂದು ಚಾರ್ಲ್ಸ್ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT