ಗುರುವಾರ , ಏಪ್ರಿಲ್ 9, 2020
19 °C
ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿ: ಜಪಾನ್‌ ಜೋಡಿಗೆ ಮಹಿಳೆಯರ ಡಬಲ್ಸ್‌ ಪ್ರಶಸ್ತಿ

ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಅಕ್ಸೆಲ್ಸನ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸನ್ ಬರ್ಮಿಂಗ್‌ಹ್ಯಾಂನಲ್ಲಿ ಭಾನುವಾರ ಕೊನೆಗೊಂಡ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಅರೆನಾ ಬರ್ಮಿಂಗ್‌ಹ್ಯಾಂ ಅಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅವರು ಚೀನಾ ತೈಪೆಯ ಚೌ ಟೀನ್ ಚೆನ್ ವಿರುದ್ಧ 21–13, 21–14 ಗೇಮ್‌ಗಳಿಂದ ಗೆಲುವು ಸಾಧಿಸಿದರು.

ಈ ಮೊದಲು ಒಟ್ಟು 11 ಬಾರಿ ಇವರಿಬ್ಬರು ಮುಖಾಮುಖಿಯಾಗಿದ್ದರು. ಈ ಪೈಕಿ 10 ಬಾರಿ ಅಕ್ಸೆಲ್ಸನ್ ಗೆಲುವು ಸಾಧಿಸಿದ್ದರು. ಭಾನುವಾರದ ಪಂದ್ಯದಲ್ಲೂ ಅವರು ನಿರಾಯಾಸವಾಗಿ ಗೆದ್ದರು. 46 ನಿಮಿಷಗಳಲ್ಲಿ ಪಂದ್ಯ ಕೊನೆಗೊಂಡಿತು.

ಮಹಿಳೆಯರ ಡಬಲ್ಸ್‌ನಲ್ಲಿ ಜಪಾನ್‌ನ ಯೂ ಕಿ ಫುಕುಶಿಮಾ ಮತ್ತು ಸಯಾಕ ಹಿರೋಟ ಜೋಡಿ ಚೀನಾದ ಡು ಯೇ ಮತ್ತು ಲಿ ಯಿನ್ ಹ್ಯೂ ಅವರನ್ನು 21–13, 21–15ರಲ್ಲಿ ಮಣಿಸಿತು. ಮಿಶ್ರ ಡಬಲ್ಸ್ ವಿಭಾಗದ ಪ್ರಶಸ್ತಿ ಇಂಡೊನೇಷ್ಯಾದ ಪ್ರವೀಣ್ ಜೋರ್ಡನ್ ಮತ್ತು ಮೇಲಾತಿ ದೇವ ಒಕ್ಟವ್ಯಂತಿ ಅವರ ಪಾಲಾಯಿತು. ಥಾಯ್ಲೆಂಡ್‌ನ ದೆಚಾಪಾಲ್ ಹಾಗೂ ಸಾಸ್ಪ್ರಿ ತೆರಟಂಚಯ್ ವಿರುದ್ಧ ಇಂಡೊನೇಷ್ಯಾ ಜೋಡಿ 21–15, 17–21, 21–8ರಲ್ಲಿ ಗೆಲುವು ಸಾಧಿಸಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು