ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಕ್ರಿಕೆಟ್‌: ಸದ್ಯದಲ್ಲೇ ನೂತನ ಕೋಚ್‌ ಆಯ್ಕೆ

Last Updated 20 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನೂತನ ಕೋಚ್‌, ಏಕದಿನ ತಂಡದ ನಾಯಕ ಹಾಗೂ ಉಪನಾಯಕರ ಆಯ್ಕೆಯ ಬಗ್ಗೆ ಸದ್ಯದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ಹೇಳಿದೆ.

ಈ ಬಗ್ಗೆ ಕ್ರಿಕೆಟ್‌ ಆಸ್ಟ್ರೇಲಿಯಾದ ಪದಾಧಿಕಾರಿಗಳು ಚರ್ಚೆ ನಡೆಸಿದ್ದು, ತಂಡವು ಜೂನ್‌ನಲ್ಲಿ ಇಂಗ್ಲೆಂಡ್‌ ಪ್ರವಾಸಕ್ಕೆ ತೆರಳುವ ಮುನ್ನ ಆಯ್ಕೆ ಪ್ರಕ್ರಿಯೆ ಮುಗಿಸಲು ನಿರ್ಧರಿಸಲಾಗಿದೆ.

’ಈ ಸಂಬಂಧ ಸೂಕ್ತ ವ್ಯಕ್ತಿಗಳ ಹೆಸರುಗಳನ್ನು ಶಿಫಾರಸು ಮಾಡಲು ಆಡಳಿತ ಮಂಡಳಿಗೆ ಹೇಳಲಾಗಿದೆ’ ಎಂದು ಸಿಎ ಮುಖ್ಯಸ್ಥ ಡೇವಿಡ್‌ ಪೀವರ್‌ ಹೇಳಿದ್ದಾರೆ.

‘ಆಡಳಿತ ಮಂಡಳಿಯು ಮುಂದಿನ ಕೆಲವು ವಾರಗಳಲ್ಲಿ ಹೆಸರುಗಳನ್ನು ಶಿಫಾರಸು ಮಾಡುವ ನಿರೀಕ್ಷೆ ಇದೆ’ ಎಂದು ಅವರು ತಿಳಿಸಿದ್ದಾರೆ.

ಆಸ್ಟ್ರೇಲಿಯಾ ತಂಡದ ನಾಯಕರಾಗಿದ್ದ ಸ್ಟೀವ್‌ ಸ್ಮಿತ್‌ ಹಾಗೂ ಉಪನಾಯಕರಾಗಿದ್ದ ಡೇವಿಡ್‌ ವಾರ್ನರ್‌ ಅವರು ಚೆಂಡು ವಿರೂಪ ಪ್ರಕರಣದಿಂದಾಗಿ ಒಂದು ವರ್ಷದ ನಿಷೇಧ ಶಿಕ್ಷೆಗೆ ಒಳಗಾಗಿದ್ದಾರೆ. ಈ ಪ್ರಕರಣದ ನಂತರ ತಂಡದ ಕೋಚ್‌ ಹುದ್ದೆಗೆ ಡೇವಿಡ್‌ ಲೆಹ್ಮನ್‌ ಅವರು ರಾಜೀನಾಮೆ ನೀಡಿದ್ದರು. 

ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಆಸ್ಟ್ರೇಲಿಯಾದ ಹಿರಿಯ ಆಟಗಾರರಾದ ಜಸ್ಟಿನ್‌ ಲ್ಯಾಂಗರ್‌, ಜೇಸನ್‌ ಗಿಲ್ಲೆಸ್ಪಿ ಹಾಗೂ ರಿಕಿ ಪಾಂಟಿಂಗ್‌ ಅವರು ಆಯ್ಕೆಯಾಗುವ ಸಂಭವವಿದೆ.

ಟೆಸ್ಟ್‌ ತಂಡದ ನಾಯಕನಾಗಿ ಟಿಮ್‌ ಪೇನ್ ಅವರನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT