ಶುಕ್ರವಾರ, ನವೆಂಬರ್ 22, 2019
27 °C
ವಿಶ್ವ ರೈಲ್ವೆ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌

ವಿಶ್ವಾಂಬರಗೆ ಎರಡು ಚಿನ್ನ

Published:
Updated:

ಬೆಂಗಳೂರು: ಕರ್ನಾಟಕದ ಅಥ್ಲೀಟ್‌ ವಿಶ್ವಾಂಬರ ಕೋಳೆಕರ್‌ ಅವರು ವಿಶ್ವ ರೈಲ್ವೆ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಜೆಕ್‌ ಗಣರಾಜ್ಯದ ಟ್ರೈಟನ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ ಶುಕ್ರವಾರ ಮುಕ್ತಾಯಗೊಂಡಿತು.

1500 ಮೀಟರ್‌ ಓಟವನ್ನು 3 ನಿಮಿಷ 53 ಸೆಕೆಂಡುಗಳಲ್ಲಿ ಕ್ರಮಿಸಿ ಅವರು ಚಿನ್ನದ ಪದಕ ತಮ್ಮದಾಗಿಸಿಕೊಂಡರು.  4x400 ಮೀಟರ್‌ ರೀಲೆಯಲ್ಲಿ ಅವರನ್ನೊಳಗೊಂಡ ತಂಡ ಚಿನ್ನದ ಪದಕ ಗೆದ್ದಿತು. 28 ವರ್ಷದ ಅಥ್ಲೀಟ್‌ ವಿಶ್ವಾಂಬರ 800 ಮೀಟರ್ ಓಟದಲ್ಲಿ ಬೆಳ್ಳಿ ಗೆದ್ದರು. 1 ನಿಮಿಷ 51 ಸೆಕೆಂಡುಗಳಲ್ಲಿ ಅವರು ಗುರಿ ತಲುಪಿದರು.

ಪ್ರತಿಕ್ರಿಯಿಸಿ (+)