ಶನಿವಾರ, ಜೂನ್ 6, 2020
27 °C

ಕಂಪ್ಯೂಟರ್‌ಗಳಿಂದ ಆಟಗಾರರ ದೃಷ್ಟಿಕೋನ ಬದಲು: ಆನಂದ್‌

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಕಂಪ್ಯೂಟರ್‌ಗಳ ಬೆಳವಣಿಗೆಯಿಂದಾಗಿ ಚೆಸ್‌ ಬಗ್ಗೆ ಆಟಗಾರರ ದೃಷ್ಟಿಕೋನ ಬದಲಾಗಿದೆ. ಬೋರ್ಡ್‌ ಮುಂದೆ ಇಬ್ಬರು ಆಟಗಾರರು ಇರುವ ವ್ಯವಸ್ಥೆ ಬಿಟ್ಟು ಬೇರೆಲ್ಲಾ ಬದಲಾಗಿದೆ ಎಂದು ಮಾಜಿ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ ಅಭಿಪ್ರಾಯಪಟ್ಟಿದ್ದಾರೆ.

ಚದುರಂಗದ ತಮ್ಮ ಪಯಣದ ಬಗ್ಗೆ ಮಾತನಾಡಿದ ಆನಂದ್‌ ‘ನಾನು ದಿಢೀರನೇ ಆಟಗಾರನಾಗಲಿಲ್ಲ. ಅದರ ಹಿಂದೆ ಶ್ರಮವಿತ್ತು. 1980ರ ದಶಕದಲ್ಲಿ ಕಲಿಯುತಿದ್ದ ರೀತಿಯನ್ನು ಈಗ ಯಾರೂ ಅನುಸರಿಸುವುದಿಲ್ಲ. ಕಂಪ್ಯೂಟರ್‌ಗಳು ಆಟಗಾರರ ಯೋಚನಾ ಲಹರಿಯನ್ನು ಬದಲಾಯಿಸಿವೆ. ಈಗ ಆಟಗಾರರು ಅಧ್ಯಯನ ಮಾಡಿಯೇ ಆಡಲು ಬರುತ್ತಾರೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು