ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊಕಬಡ್ಡಿ: ಪುಣೇರಿ, ಮುಂಬಾಗೆ ಜಯಭೇರಿ

Last Updated 27 ನವೆಂಬರ್ 2022, 2:34 IST
ಅಕ್ಷರ ಗಾತ್ರ

ಹೈದರಾಬಾದ್: ಪಂಕಜ್ ಮೋಹಿತೆ ಮತ್ತು ಅಸ್ಲಂ ಇನಾಮದಾರ್ ಅವರ ಮಿಂಚಿನ ಆಟದಿಂದಾಗಿ ಪುಣೇರಿ ಪಲ್ಟನ್ ತಂಡವು ಪ್ರೊ ಕಬಡ್ಡಿ ಪಂದ್ಯದಲ್ಲಿ ಜಯಿಸಿತು.

ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಪುಣೇರಿ ತಂಡವು 38–25ರಿಂದ ತೆಲುಗು ಟೈಟನ್ಸ್‌ ವಿರುದ್ಧ ಜಯಿಸಿತು.

ಪುಣೇರಿ ತಂಡದ ರೇಡರ್‌ಗಳಾದ ಪಂಕಜ್ ಹಾಗೂ ಅಸ್ಲಂ ತಲಾ ಎಂಟು ಅಂಕಗಳನ್ನು ಗಳಿಸಿದರು. ಅವರೊಂದಿಗೆ ಆಕಾಶ್ ಶಿಂಧೆ (5) ಕೂಡ ಮಿಂಚಿದರು. ಇದರಿಂದಾಗಿ ತಂಡವು ಪಾರಮ್ಯ ಮೆರೆಯಿತು. ಮೊದಲಾರ್ಧದಲ್ಲಿ ಪುಣೇರಿ ತಂಡವು 14–10ರಿಂದ ಮುನ್ನಡೆ ಸಾಧಿಸಿತ್ತು. ನಂತರದ ಅವಧಿಯಲ್ಲಿ ಮತ್ತಷ್ಟು ವೇಗವಾಗಿ ಅಂಕಗಳನ್ನು ಗಳಿಸಿತು.

ಮುಂಬಾಗೆ ಜಯ: ಇನ್ನೊಂದು ಪಂದ್ಯದಲ್ಲಿ ಗುಮಾನ್ ಸಿಂಗ್ ಮತ್ತು ಆಶಿಶ್ ಅವರ ಅಮೋಘ ಆಟದ ಬಲದಿಂದ ಯು ಮುಂಬಾ ತಂಡವು 49–41ರಿಂದ ಬೆಂಗಾಲ್ ವಾರಿಯರ್ಸ್ ವಿರುದ್ಧ ಗೆದ್ದಿತು.

ಮುಂಬಾ ತಂಡದ ಗುಮಾನ್ ಸಿಂಗ್ (14) ಹಾಗೂ ಆಶಿಶ್ (13) ಮಿಂಚಿದರು. ಬೆಂಗಾಲ್ ತಂಡದ ಮಣಿಂದರ್ ಸಿಂಗ್ (13 ) ಉತ್ತಮವಾಗಿ ಆಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT