ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲಿಬಾಲ್‌: ಭರವಸೆಯಲ್ಲಿ ಚೆನ್ನೈ

Last Updated 2 ಫೆಬ್ರುವರಿ 2022, 19:12 IST
ಅಕ್ಷರ ಗಾತ್ರ

ಬೆಂಗಳೂರು: ಪ್ರೈಮ್‌ ವಾಲಿ ಬಾಲ್‌ ಲೀಗ್‌ ಟೂರ್ನಿಗಾಗಿ ಉತ್ತಮ ತಯಾರಿ ನಡೆಸಿದ್ದು, ಅತ್ಯುತ್ತಮ ಸಾಮರ್ಥ್ಯ ತೋರಲಿದ್ದೇವೆ ಎಂದು ಚೆನ್ನೈ ಬ್ಲಿಟ್ಜ್ ತಂಡದ ನಾಯಕಮೋಹನ್ ಉಕ್ರಪಾಂಡಿಯನ್‌ ಹೇಳಿದ್ದಾರೆ.

ಫೆಬ್ರುವರಿ ಐದರಿಂದ ಹೈದರಾಬಾ ದ್‌ನ ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ಟೂರ್ನಿ ಲೀಗ್ ಆರಂಭವಾಗಲಿದ್ದು, ಆರರಂದು ಚೆನ್ನೈ ಬ್ಲಿಟ್ಜ್‌ ತಂಡವು ತನ್ನ ಮೊದಲ ಪಂದ್ಯದಲ್ಲಿ ಅಹಮದಾಬಾದ್ ಡಿಫೆಂಡರ್ಸ್ ವಿರುದ್ಧ ಆಡಲಿದೆ.

ಬುಧವಾರ ವರ್ಚುವಲ್‌ ಸಂವಾ ದದಲ್ಲಿ ಮಾತನಾಡಿದ ಮೋಹನ್‌, ‘ನಮ್ಮದು ಸಮತೋಲಿತ ತಂಡ. ವಿದೇಶಿ ಕೋಚ್‌ಗಳೂ ಇದ್ದಾರೆ. ಉತ್ತಮ ಸಾಮರ್ಥ್ಯ ತೋರುವ ನಿರೀಕ್ಷೆಯಿದೆ. 15 ಪಾಯಿಂಟ್‌ಗಳ ಪಂದ್ಯದಲ್ಲಿ ಅನುಭವ ಮುಖ್ಯವಾಗುತ್ತದೆ‘ ಎಂದರು.

‘ಉತ್ತಮ ತರಬೇತಿ ನಡೆದಿದೆ.ಟೂರ್ನಿಗಾಗಿ ಕಾತರರಾಗಿದ್ದೇವೆ. ಯುವ ಆಟಗಾರರಿಗೆ ಲೀಗ್‌ನಿಂದ ತುಂಬ ಅನುಕೂಲವಾಗಲಿದೆ‘ ಎಂದು ಅಭಿಪ್ರಾಯಪಟ್ಟರು.ಮೋಹನ್ ರಾಷ್ಟ್ರೀಯ ತಂಡದ ಆಟಗಾರನೂ ಹೌದು. ಪ್ರೈಮ್‌ ವಾಲಿಬಾಲ್ ಲೀಗ್ ಟೂರ್ನಿಯು ಸೋನಿ ಟೆನ್‌ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT