ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1,500 ಮೀಟರ್‌ ಓಟದಲ್ಲಿ ಬೆಂಗಳೂರಿನ ನಾಗರಾಜ್‌ ಪ್ರಥಮ

ಗೆಲುವಿನ ಓಟ ಮುಂದುವರಿಸಿದ ಮಂಗಳೂರು ತಂಡ
Last Updated 24 ಅಕ್ಟೋಬರ್ 2019, 16:06 IST
ಅಕ್ಷರ ಗಾತ್ರ

ಬೀದರ್‌: ಇಲ್ಲಿಯ ಗುರುನಾನಕ ದೇವ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಗುರುವಾರ ನಡೆದ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಅಥ್ಲೆಟಿಕ್ಸ್‌ ಕ್ರೀಡಾಕೂಟದ 1,500 ಮೀಟರ್‌ ಓಟದ ಸ್ಪರ್ಧೆಯಲ್ಲಿ ಬೆಂಗಳೂರಿನ ನಾಗರಾಜ್ ಸಿದ್ದಪ್ಪ ಕೇದಾರಜಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಪುರುಷರ ವಿಭಾಗ:

1,500 ಮೀಟರ್‌ ಓಟ: ಬೆಂಗಳೂರಿನ ಎಸ್‌ಇಎ ಕಾಲೇಜ್ ಆಫ್ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಾಜಿಯ ನಾಗರಾಜ್ ಸಿದ್ದಪ್ಪ ಕೇದಾರಜಿ (4:24.77 ಸೆಕೆಂಡ್‌), 2) ಮೂಡಬಿದರೆಯ ಆಳ್ವಾ ಇನ್‌ಸ್ಟಿಟ್ಯೂಟ್‌ ಆಫ್ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಾಜಿಯ ರಾಜೇಶ್‌ ಟಿ.(4:25.38 ಸೆಕೆಂಡ್), 3)ಮಂಗಳೂರಿನ ಶ್ರೀನಿವಾಸ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಾಜಿಯ ಅಭಿಷೇಕ ವಿಜಯ (4:29.32 ಸೆಕೆಂಡ್‌).

ಮಹಿಳೆಯರ ವಿಭಾಗ

4X100 ಮೀಟರ್‌ ರಿಲೆ : 1) ಮಂಗಳೂರಿನ ಸಹ್ಯಾದ್ರಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಅಂಡ್‌ ಮ್ಯಾನೇಜ್‌ಮೆಂಟ್‌ನ ಮನಿಷಾ ಎ., ಅನ್ವಿತಾ ಶೆಟ್ಟಿ, ದೀಕ್ಷಾ ಪಿ., ವೈಷ್ಣವಿ ಡಿ.ಕೆ. (55.40 ಸೆಕೆಂಡ್‌), 2) ಬೆಂಗಳೂರಿನ ಆರ್‌.ವಿ. ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಅಲಿಶಾ, ಐಶ್ವರ್ಯ ಯು., ನಮಿತಾ ರಾವ್‌, ನಮ್ಯಾ ಎಲ್‌.ಜಿ. (57.20 ಸೆಕೆಂಡ್‌), 3) ಕಾರ್ಕಳದ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಾಜಿಯ ಮೇಧಾ ಎಸ್., ಲಾವಣ್ಯ, ವಿನುತಾ ಜಿ.ಪಾಲನ್, ನೇಹಾ ಎಂ.ಆರ್, (58.00 ಸೆಕೆಂಡ್‌),

5 ಸಾವಿರ ಮೀಟರ್‌ ಓಟ :1) ಕಾರ್ಕಳದ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಾಜಿಯ ಸುಮಾ (21:23.81 ಸೆಕೆಂಡ್‌), 2) ಧಾರವಾಡದ ಎಸ್‌ಡಿಎಂ ಕಾಲೇಜ್ ಆಫ್‌ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿಯ ಶ್ರೀನಿಧಿ ಸುರಗೊಂಡ (21:40.47 ಸೆಕೆಂಡ್‌), 3) ಮೂಡಬಿದರೆಯ ಆಳ್ವಾ ಇನ್‌ಸ್ಟಿಟ್ಯೂಟ್‌ ಆಫ್ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಾಜಿಯ ಅರ್ಪಿತಾ ಎಚ್.ಎಸ್‌.

ಪೋಲ್‌ ವಾಲ್ಟ್‌ :1) ಕಾರ್ಕಳದ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಾಜಿಯ ಪೂಜಿತಾ ಜಿ.ಎಸ್‌. (1.22 ಮೀಟರ್‌), 2) ಮಂಗಳೂರಿನ ಸಹ್ಯಾದ್ರಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಅಂಡ್‌ ಮ್ಯಾನೇಜ್‌ಮೆಂಟ್‌ನ ಸ್ವಾತಿ (1.16 ಮೀಟರ್‌), 3) ಕಾರ್ಕಳದ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಾಜಿಯ ಚಿತ್ರಾ (1.10 ಮೀಟರ್‌).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT