ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದೀಪನ ಮದ್ದು ಸೇವನೆ ಪ್ರಕರಣ: ಸಂಜಿತಾಗೆ ನಾಲ್ಕು ವರ್ಷ ನಿಷೇಧ?

ಉದ್ದೀಪನ ಮದ್ದು ಸೇವನೆ
Last Updated 14 ಸೆಪ್ಟೆಂಬರ್ 2018, 18:30 IST
ಅಕ್ಷರ ಗಾತ್ರ

ನವದೆಹಲಿ: ಉದ್ದೀಪನ ಮದ್ದು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ವೇಟ್‌ಲಿಫ್ಟರ್‌ ಸಂಜಿತಾ ಚಾನು ಅವರು ಬಿ ಮಾದರಿಯ ಪರೀಕ್ಷೆಯಲ್ಲೂ ವಿಫಲರಾಗಿದ್ದಾರೆ.

ಈ ಪ್ರಕರಣದ ವಿಚಾರಣೆಯನ್ನು ಹಂಗರಿಯಲ್ಲಿರುವ ಅಂತರರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ (ಐಡಬ್ಲ್ಯುಎಫ್‌)ನ ವಿಚಾರಣೆ ಸಮಿತಿಯು ನಡೆಸಲಿದೆ. ಈ ವೇಳೆ ಸಂಜಿತಾ ತಾವು ನಿರಪರಾಧಿ ಎಂದು ಸಾಬೀತುಪಡಿಸಲು ವಿಫಲರಾದರೆ ಅವರು ಗರಿಷ್ಠ ನಾಲ್ಕು ವರ್ಷ ನಿಷೇಧ ಶಿಕ್ಷೆಗೊಳಗಾಗಲಿದ್ದಾರೆ.

‘ಬಿ ಮಾದರಿ ಪರೀಕ್ಷೆಯ ವರದಿಯನ್ನು ಸೆಪ್ಟೆಂಬರ್‌ 11ರಂದು ನಮಗೆ ಕಳುಹಿಸಲಾಗಿದೆ. ಈ ಪ್ರಕರಣದಲ್ಲಿ ಐಡಬ್ಲ್ಯುಎಫ್‌ ಪ್ರಮಾದಗಳನ್ನು ಎಸಗಿದೆ. ಆದೇಶದ ಪ್ರತಿಯ ಮೊದಲ ಪ್ಯಾರಾದಲ್ಲಿ ಪರೀಕ್ಷೆಗೆ ಸಂಗ್ರಹಿಸಿದ ಮಾದರಿಯ ಸಂಖ್ಯೆ 1599000 ಎಂದಿದೆ. ಆದರೆ, ನಾಲ್ಕನೇ ಪ್ಯಾರಾದಲ್ಲಿ 1599176 ಎಂದು ನಮೂದಿಸಲಾಗಿದೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ’ ಎಂದು ಸಂಜಿತಾ ಅವರ ಸಹೋದರ ಬಿಜೇನ್‌ ಸಿಂಗ್‌ ಹೇಳಿದ್ದಾರೆ.

‘ಒಂದು ವೇಳೆ ಅಲ್ಲಿಯೂ ನಮಗೆ ನ್ಯಾಯ ದೊರಕದಿದ್ದರೆ, ಅಂತರರಾಷ್ಟ್ರೀಯ ಕ್ರೀಡಾ ನ್ಯಾಯಾಲಯದ ಮೊರೆ ಹೋಗಲಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

ಇತ್ತೀಚೆಗೆ ಸಂಜಿತಾ ಅವರು ಉದ್ದೀಪನ ಮದ್ದು ಸೇವಿಸಿರುವುದು ಧೃಡಪಟ್ಟಿತ್ತು. ಅವರ ಮೂತ್ರದ ಮಾದರಿಯಲ್ಲಿ ಟೆಸ್ಟೋಸ್ಟೆರಾನ್‌ ಪತ್ತೆಯಾಗಿತ್ತು. ಇದರಿಂದಾಗಿ ಐಡಬ್ಲ್ಯುಎಫ್‌ ಸಂಜಿತಾ ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಿತ್ತು.

ಇದಾದ ನಂತರ ಅವರ ಉದ್ದೀಪನ ಮದ್ದು ಪರೀಕ್ಷೆಗೆ ಸಂಗ್ರಹಿಸಿದ ಮಾದರಿಯ ಸಂಖ್ಯೆ ಮತ್ತು ಆದೇಶದಲ್ಲಿ ಪ್ರಕಟಿಸಿರುವ ಪ್ರಕರಣದ ವರದಿಯಲ್ಲಿ ಸಂಖ್ಯೆ ಅದಲು–ಬದಲಾಗಿರುವ ಕುರಿತು ಪ್ರಮಾದವಾಗಿದೆ ಎಂದು ಐಡಬ್ಲ್ಯುಎಫ್‌ ಒಪ್ಪಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT