ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೈಬರ್‌ ಕಾನೂನು ತಿಳಿದು ಅಂತರ್ಜಾಲ ಬಳಸಿ’

Last Updated 22 ಏಪ್ರಿಲ್ 2018, 18:36 IST
ಅಕ್ಷರ ಗಾತ್ರ

ಬೆಂಗಳೂರು: ‘ಜಾಲತಾಣಗಳನ್ನು ಬಳಸುತ್ತಿರುವವರೆಲ್ಲರೂ ಸೈಬರ್‌ ಕಾನೂನಿನ ಬಗ್ಗೆ ಸಮರ್ಪಕವಾಗಿ ಅರಿತಿರಬೇಕು’ ಎಂದು ಸಿಲಿಕಾನ್‌ ಸಿಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಚ್.ಎಂ.ಚಂದ್ರಶೇಖರ್ ತಿಳಿಸಿದರು.

ಕೆ.ಆರ್.ಪುರದಲ್ಲಿನ ಸಿಲಿಕಾನ್‌ ಸಿಟಿ ಕಾಲೇಜಿನಲ್ಲಿ ನಡೆದ ‘ಸೈಬರ್ ಸ್ಟೇಸ್– ಇಶ್ಯೂಸ್ ಅಂಡ್‌ ಚಾಲೆಂಜಸ್’ ವಿಷಯ ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಸಾಮಾಜಿಕ ಜಾಲತಾಣಗಳಲ್ಲಿ ಗೋಚರಿಸುವ ಸಂದೇಶಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು, ಅವುಗಳ ಪರಿಣಾಮಗಳನ್ನು ಅರಿತಿರಬೇಕು. ಆ ಬಳಿಕವೇ ಅದನ್ನು ಮತ್ತೊಬ್ಬರಿಗೆ ರವಾನಿಸಬೇಕು ಎಂದು ಕಿವಿಮಾತು ಹೇಳಿದರು.

ಗುಪ್ತಚರ ವಿಭಾಗದ ಡಿಎಸ್ಪಿ ಬಾಬು ಆಂಜಿನಪ್ಪ, ‘ಅಂರ್ತಜಾಲದಲ್ಲಿ ನಡೆಯುತ್ತಿರುವ ಅಪರಾಧಗಳು ವ್ಯಾಪಕವಾಗಿವೆ. ಒಬ್ಬರಿಂದ ಒಬ್ಬರಿಗೆ ಕ್ಷಣದಲ್ಲಿ ರವಾನೆಯಾಗುವ ಸಂದೇಶಗಳ ಸತ್ಯಾಸತ್ಯತೆ ಅರಿಯದಿದ್ದರೆ, ದೊಡ್ಡ ಅನಾಹುತಗಳೇ ಆಗುತ್ತವೆ’ ಎಂದರು.

ಈ ಸಂದರ್ಭದಲ್ಲಿ ಸೈಬರ್ ಸ್ಟೇಸ್ – ಇಶ್ಯೂಸ್ ಅಂಡ್‌ ಚಾಲೆಂಜೆಸ್’ ವಿಷಯಕ್ಕೆ ಸಂಬಂಧಿಸಿದ ಲೇಖನಗಳ ಸಂಕಲನವನ್ನು ಬಿಡುಗಡೆ ಮಾಡಲಾಯಿತು. ನಗರದ ವಿವಿಧ ಕಾಲೇಜುಗಳ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT