ರಾಜ್ಯಮಟ್ಟದ ಅಂತರ ಕಾಲೇಜು ಬ್ಯಾಸ್ಕೆಟ್‌ಬಾಲ್‌ನಲ್ಲಿ ವಿಜಯಪುರಕ್ಕೆ ಗೆಲುವು

7

ರಾಜ್ಯಮಟ್ಟದ ಅಂತರ ಕಾಲೇಜು ಬ್ಯಾಸ್ಕೆಟ್‌ಬಾಲ್‌ನಲ್ಲಿ ವಿಜಯಪುರಕ್ಕೆ ಗೆಲುವು

Published:
Updated:
Deccan Herald

ಹೊಸಪೇಟೆ: ಇಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಅಂತರ ಕಾಲೇಜು ಹೊನಲು–ಬೆಳಕಿನ ಬ್ಯಾಸ್ಕೆಟ್‌ಬಾಲ್‌ ಪಂದ್ಯಾವಳಿಯ ಮಹಿಳೆಯರ ವಿಭಾಗದಲ್ಲಿ ವಿಜಯಪುರ ತಂಡ ಗೆಲುವು ಸಾಧಿಸಿದೆ.

ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ದಾವಣಗೆರೆ ತಂಡವನ್ನು ಮಣಿಸಿ ವಿಜಯಪುರ ತಂಡವು ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಇದಕ್ಕೂ ಮುನ್ನ ನಡೆದ ಲೀಗ್‌ ಪಂದ್ಯಗಳಲ್ಲಿ ವಿಜಯಪುರ ತಂಡವು ನಗರದ ರೋಸ್‌ಬಡ್‌, ಮಾತಾ ‘ಬಿ’ ತಂಡಗಳನ್ನು ಸೋಲಿಸಿದರೆ, ದಾವಣಗೆರೆ ತಂಡವು ಬಳ್ಳಾರಿ, ನಗರದ ತಾಲ್ಲೂಕು ಕ್ರೀಡಾಂಗಣ ತಂಡಗಳನ್ನು ಸೋಲಿಸಿ ಅಂತಿಮ ಘಟ್ಟ ಪ್ರವೇಶಿಸಿದವು.

ಪುರುಷರ ವಿಭಾಗದ ಲೀಗ್‌ ಪಂದ್ಯಗಳಲ್ಲಿ ಉತ್ತಮ ಸಾಧನೆ ತೋರಿರುವ ಧಾರವಾಡ, ಹೊಸಪೇಟೆ, ರೋಸ್‌ಬಡ್‌ ಹಾಗೂ ದಾವಣಗೆರೆ ತಂಡಗಳು ಸೆಮಿಫೈನಲ್‌ ಪ್ರವೇಶಿಸಿವೆ. ಪ್ರಶಸ್ತಿಗಾಗಿ ಮಂಗಳವಾರ ರಾತ್ರಿ ಸೆಣಸಾಟ ನಡೆಯಲಿದೆ. ಮಾತಾ ಪದವಿ ಕಾಲೇಜಿನಿಂದ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !