ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಬಾಕ್ಸಿಂಗ್‌: ಹರಿಯಾಣ ಚಾಂಪಿಯನ್‌

Last Updated 6 ಜನವರಿ 2019, 20:15 IST
ಅಕ್ಷರ ಗಾತ್ರ

ವಿಜಯನಗರ, ಬಳ್ಳಾರಿ:ಕೊನೆಯ ದಿನ ಪ್ರಾಬಲ್ಯ ಮೆರೆದ ಹರಿಯಾಣದ ಬಾಕ್ಸರ್‌ಗಳು ಜೆಎಸ್‌ಡಬ್ಲ್ಯು ಆಶ್ರಯದಲ್ಲಿ ಇಲ್ಲಿನ ಇನ್‌ಸ್ಪೈರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೋರ್ಟ್ಸ್‌ನಲ್ಲಿನಡೆದ ಮೂರನೇ ಎಲೀಟ್‌ ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಜಯಿಸಿದರು.

ಹರಿಯಾಣ ಒಟ್ಟು 41 ಪಾಯಿಂಟ್ಸ್‌ ಕಲೆಹಾಕಿದರೆ, ರೈಲ್ವೆ ತಂಡ 39 ಪಾಯಿಂಟ್ಸ್‌ ಗಳಿಸಿ ರನ್ನರ್ಸ್‌ ಅಪ್‌ ಸ್ಥಾನ ಪಡೆಯಿತು. ಪಂಜಾಬ್‌ನ ಸಿಮ್ರನಜಿತ್‌ ಕೌರ್ (ಉತ್ತಮ ಬಾಕ್ಸರ್‌), ತಮಿಳುನಾಡಿನ ಎಸ್‌. ಕಲಾವತಿ (ಉದಯೋನ್ಮುಖ ಬಾಕ್ಸರ್‌) ಮತ್ತು ತೆಲಂಗಾಣದ ನಿಖತ್ ಜರೀನಾ (ಚಾಲೆಂಜಿಂಗ್ ಬಾಕ್ಸರ್‌) ವೈಯಕ್ತಿಕ ಪ್ರಶಸ್ತಿ ಪಡೆದರು. ಹರಿಯಾಣ ಮತ್ತು ರೈಲ್ವೆ ಬಾಕ್ಸರ್‌ಗಳು ತಲಾ ಆರು ಚಿನ್ನದ ಪದಕ ಪಡೆದರು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದ ಮನಿಷಾ ಮೌನ್‌ 54 ಕೆ.ಜಿ. ವಿಭಾಗದಲ್ಲಿ ಬಾರಿ ನಿರಾಸೆ ಅನುಭವಿಸಿದರು. ಅಖಿಲ ಭಾರತ ಪೊಲೀಸ್‌ನಮೀನಾಕುಮಾರಿ ದೇವಿ ಪ್ರಬಲ ಪಂಚ್‌ಗಳ ಮೂಲಕ ಮನಿಷಾ ಎದುರು ಗೆಲುವು ಪಡೆದು ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದರು.

ಹರಿಯಾಣದ ಶಶಿ ಚೋಪ್ರಾ (57 ಕೆ.ಜಿ. ವಿಭಾಗ), ನುಪೂರ (75 ಕೆ.ಜಿ. ವಿಭಾಗ) ನಿರಾಸೆ ಅನುಭವಿಸಿದರು. ಪಿಂಕಿ ರಾಣಿ ಜಾಂಗ್ರಾ (51 ಕೆ.ಜಿ.), ನೀರಜಾ (60 ಕೆ.ಜಿ.) ಮತ್ತು ಪೂಜಾ ರಾಣಿ (81 ಕೆ.ಜಿ.) ಚಿನ್ನದ ಪದಕ ಜಯಿಸಿದರು. 69 ಕೆ.ಜಿ. ವಿಭಾಗದಲ್ಲಿ ಸಿಮ್ರನಜಿತ್‌ ಕೌರ್‌ ಅಸ್ಸಾಂನ ಲೊವ್ಲಿನಾ ಬರ್ಗೊಹೈನ್‌ ಎದುರು ಗೆದ್ದು ಚಿನ್ನದ ಒಡತಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT