ಗುರುವಾರ , ನವೆಂಬರ್ 21, 2019
22 °C

ವಿಶ್ವ ಮಹಿಳಾ ಬಾಕ್ಸಿಂಗ್‌: ಭಾರತಕ್ಕೆ ಬೆಳ್ಳಿ ತಂದ ಮಂಜು ರಾಣಿ

Published:
Updated:
Prajavani

ಉಲಾನ್‌ ಉಡೆ, ರಷ್ಯಾ: ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚೊಚ್ಚಲ ಚಿನ್ನದ ‍ಪದಕಕ್ಕೆ ಕೊರಳೊಡ್ಡಲು ಕಾತರರಾಗಿ ಅಖಾಡಕ್ಕಿಳಿದ್ದಿ ಬಾರತದ ಬಾಕ್ಸರ್‌ ಮಂಜು ರಾಣಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.

ಚಿನ್ನದ ಪದಕಕ್ಕಾಗಿ ಇನ್ನೊಂದು ‘ಪಂಚ್‌’ ಮಾಡಲು ಅವರಿಗೆ ಭಾನುವಾರ ಸಾಧ್ಯವಾಗಲಿಲ್ಲ.

48 ಕೆ.ಜಿ.ವಿಭಾಗದಲ್ಲಿ ಚಾಂಪಿಯನ್‌ಷಿಪ್‌ನ ಫೈನಲ್‌ಗೆ ರಿಂಗ್‌ಗೆ ಇಳಿದಿದ್ದ ಮಂಜು ರಾಣಿ, ರಷ್ಯಾದ ಎರಡನೇ ಶ್ರೇಯಾಂಕದ ಬಾಕ್ಸರ್‌ ಏಕ್ತರಿನಾ ಪಾಲ್ಟಸೆವ ಅವರ ಎದುರು ಚಿನ್ನ ಗೆದ್ದು ದಾಖಲೆ ನಿರ್ಮಿಸಲು ಸಾಧ್ಯವಾಗಲಿಲ್ಲ.

ಫೈನಲ್‌ನಲ್ಲಿ ಮಂಜು ರಾಣಿ 1–4 ಪಾಯಿಂಟ್ಸ್‌ನಿಂದ ಏಕ್ತರಿನಾ ಪಾಲ್ಟಸೆವ ವಿರುದ್ಧ ಪರಾಭವಗೊಂಡರು.

ಚೊಚ್ಚಲ ವಿಶ್ವ ಚಾಂಪಿಯನ್‌ಷಿಪ್‌ನಲ್ಲೇ ಅಂತಿಮ ಘಟ್ಟ ತಲುಪಿದ ಭಾರತದ ಎರಡನೇ ಬಾಕ್ಸರ್‌ ಎಂಬ ಹಿರಿಮೆಗೆ ಮಂಜು ಭಾಜನರಾಗಿದ್ದಾರೆ.

ಫೈನಲ್‌ನಲ್ಲಿ ಬೆಳ್ಳಿ ಗೆದ್ದ ಮಂಜು ರಾಣಿ ಸಂಭ್ರಮ ವ್ಯಕ್ತಪಡಿಸಿದ ಕ್ಷಣವನ್ನು ಬಾಕ್ಸಿಂಗ್‌ ಫೆಡರೇಷನ್‌ ಟ್ವೀಟ್‌ ಮಾಡಿದೆ.

ಪ್ರತಿಕ್ರಿಯಿಸಿ (+)