ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷೇಧ ಶಿಕ್ಷೆ: ಕೋಲ್ಮನ್‌ ಮೇಲ್ಮನವಿ

ಉದ್ದೀಪನಾ ಮದ್ದು ಸೇವನೆ ತಡೆ ನಿಯಮಗಳ ಉಲ್ಲಂಘನೆ
Last Updated 28 ಅಕ್ಟೋಬರ್ 2020, 14:33 IST
ಅಕ್ಷರ ಗಾತ್ರ

ಪ್ಯಾರಿಸ್‌ : ಉದ್ದೀಪನಾ ಮದ್ದು ಸೇವನೆ ತಡೆ ನಿಯಮಗಳನ್ನು ಉಲ್ಲಂಘಿಸಿ ಎರಡು ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಿರುವ ವಿಶ್ವ ಚಾಂಪಿಯನ್‌ ವೇಗದ ಓಟಗಾರ ಕ್ರಿಸ್ಟಿಯನ್‌ ಕೋಲ್ಮನ್‌ ಅವರು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಿದ್ದಾರೆ. ಕೋಲ್ಮನ್‌ ಅವರ ಮ್ಯಾನೇಜರ್ ಈ ವಿಷಯ ತಿಳಿಸಿದ್ದಾರೆ.

ಹೋದ ವರ್ಷ ದೋಹಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನ 100 ಮೀ. ವಿಭಾಗದಲ್ಲಿ ಅಮೆರಿಕದ ಕೋಲ್ಮನ್‌ ಅಗ್ರಸ್ಥಾನ ಗಳಿಸಿದ್ದರು. 9.76 ಸೆಕೆಂಡುಗಳಲ್ಲಿ ಅವರು ಗುರಿ ಮುಟ್ಟಿದ್ದರು.

‘ವಿಶ್ವ ಅಥ್ಲೆಟಿಕ್ಸ್ ನಿಯಮಗಳ ಅಡಿಯಲ್ಲಿ ಸ್ಥಾಪಿಸಲಾದ ಶಿಸ್ತು ನ್ಯಾಯಮಂಡಳಿಯ ನಿರ್ಧಾರವು ದುರದೃಷ್ಟಕರ. ತೀರ್ಪು ಪ್ರಶ್ನಿಸಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ಶೀಘ್ರವೇ ಮೇಲ್ಮನವಿ ಸಲ್ಲಿಸಲಾಗುವುದು‘ ಎಂದು ಕೋಲ್ಮನ್‌ ಅವರ ಮ್ಯಾನೇಜರ್‌ ಇಮ್ಯಾನ್ಯುಯೆಲ್ ಹಡ್ಸನ್ ಟ್ವೀಟ್ ಮಾಡಿದ್ದಾರೆ.

ಕೋಲ್ಮನ್‌ ಅವರನ್ನು ಜೂನ್‌ನಲ್ಲಿ ತಾತ್ಕಾಲಿಕವಾಗಿ ಅಮಾನತು ಮಾಡಲಾಗಿತ್ತು. ಬಳಿಕ ವಿಶ್ವ ಅಥ್ಲೆಟಿಕ್ಸ್ ಶಿಸ್ತು ನ್ಯಾಯಮಂಡಳಿಯು ವಿಚಾರಣೆ ನಡೆಸಿ ನಿಷೇಧ ಶಿಕ್ಷೆ ಪ್ರಕಟಿಸಿತ್ತು. ಎರಡು ವರ್ಷಗಳ ಅವರ ಶಿಕ್ಷೆಯ ಅವಧಿ 2020ರ ಮೇ 14ರಿಂದಲೇ ಅನ್ವಯವಾಗುತ್ತಿದೆ.

ಎರಡು ವರ್ಷಗಳ ಶಿಕ್ಷೆಯೇ ಖಚಿತವಾದರೆ ಕೋಲ್ಮನ್‌ ಅವರು ಮುಂದಿನ ವರ್ಷ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ನಿಂದ ಹೊರಗುಳಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT