ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Athletics Day 2022: ವಿಶ್ವ ಅಥ್ಲೆಟಿಕ್ಸ್ ದಿನದ ಮಾಹಿತಿ ಇಲ್ಲಿದೆ...

Last Updated 7 ಮೇ 2022, 7:48 IST
ಅಕ್ಷರ ಗಾತ್ರ

ಬೆಂಗಳೂರು: ಜಾಗತಿಕವಾಗಿವಿಶ್ವ ಅಥ್ಲೆಟಿಕ್ಸ್ ದಿನವನ್ನು ಮೇ ತಿಂಗಳಲ್ಲಿ ಆಚರಣೆ ಮಾಡಲಾಗುತ್ತಿದೆ.ಅಂತರರಾಷ್ಟ್ರೀಯ ಹವ್ಯಾಸಿ ಅಥ್ಲೆಟಿಕ್ ಸಂಸ್ಥೆ (ಐಎಎಎಫ್) 1996ರಿಂದ ಈ ದಿನಆಚರಿಸುತ್ತಿದೆ.

ವರ್ಷದ ವಿಶ್ವ ಅಥ್ಲೆಟಿಕ್ಸ್ ದಿನಾಂಕವನ್ನು ಐಎಎಎಫ್ ನಿರ್ಧರಿಸುತ್ತದೆ. ಈ ಸಲ ಮೇ 7ರಂದು ವಿಶ್ವ ಅಥ್ಲೆಟಿಕ್ಸ್ ದಿನ ಆಚರಿಸಲಾಗುತ್ತಿದೆ.

ಜಾಗತಿಕವಾಗಿಅಥ್ಲೆಟಿಕ್ಸ್ ಅನ್ನುಉತ್ತೇಜಿಸುವ ಸಲುವಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಇತರೆ ಕ್ರೀಡೆಗಳಂತೆ ಅಥ್ಲೆಟಿಕ್ಸ್‌ ಬೆಳೆಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.

ಏಷ್ಯಾ, ಆಫ್ರಿಕಾ ಖಂಡಗಳಲ್ಲಿಅಥ್ಲೆಟಿಕ್ಸ್ ಉತ್ತೇಜಿಸಲುಐಎಎಎಫ್ ಹೆಚ್ಚು ಶ್ರಮಿಸುತ್ತಿದೆ. ಶಾಲಾ ವಿದ್ಯಾರ್ಥಿಗಳಲ್ಲಿ ಇದರ ಬಗ್ಗೆ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳ ಮೂಲಕ ಅದು ಕೆಲಸ ಮಾಡುತ್ತಿದೆ.

ಕ್ರೀಡೆಯನ್ನು ಮಾನವೀಯ ನೆಲೆಗಟ್ಟಿನಲ್ಲಿ ನೋಡಬೇಕು, ಧರ್ಮ, ಜಾತಿ, ಬಣ್ಣ ಹಾಗೂ ಸಂಕುಚಿತ ಮನೋಭಾವದಿಂದ ಕ್ರೀಡೆಯನ್ನು ನೋಡಬಾರದು ಎಂದುಐಎಎಎಫ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT