ಬುಧವಾರ, ಅಕ್ಟೋಬರ್ 16, 2019
21 °C

ವಿಶ್ವ ಬಿಲಿಯರ್ಡ್ಸ್: ಫೈನಲ್‌ಗೆ ಕೊಠಾರಿ

Published:
Updated:
Prajavani

ಮೆಲ್ಬರ್ನ್‌: ಅದ್ಭುತ ಲಯ ಮುಂದುವರಿಸಿದ ಹಾಲಿ ಚಾಂಪಿಯನ್‌ ಭಾರತದ ಸೌರವ್‌ ಕೊಠಾರಿ ಶುಕ್ರವಾರ ವಿಶ್ವ ಬಿಲಿಯರ್ಡ್ಸ್ ಫೈನಲ್‌ಗೆ ಕಾಲಿಟ್ಟಿದ್ದಾರೆ. ಸೆಮಿಫೈನಲ್‌ನಲ್ಲಿ ಅವರು ಹಲವು ಬಾರಿಯ ವಿಶ್ವ ಚಾಂಪಿಯನ್‌ ಇಂಗ್ಲೆಂಡ್‌ನ ಮೈಕ್‌ ರಸೆಲ್‌ ಅವರನ್ನು ಮಣಿಸಿದರು.

ನಾಲ್ಕು ತಾಸು ನಡೆದ ನಾಲ್ಕರ ಘಟ್ಟದ ಹಣಾಹಣಿಯಲ್ಲಿ 1090–594 ಪಾಯಿಂಟ್ಸ್‌ನಿಂದ ಸೌರವ್‌ ಗೆದ್ದರು.

ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಭಾರತದ ಆಟಗಾರ 1076–484ರಿಂದ ಇಂಗ್ಲೆಂಡ್‌ನ ರಾಬ್‌ ಹಾಲ್‌ ಸವಾಲು ಮೀರಿದ್ದರು.

ಶನಿವಾರ ನಡೆಯುವ ಫೈನಲ್‌ ಹಣಾಹಣಿಯಲ್ಲಿ ಅವರು ಸಿಂಗಪುರದ ಪೀಟರ್‌ ಗಿಲ್‌ಕ್ರಿಸ್ಟ್‌ ಅವರೊಂದಿಗೆ ಸೆಣಸಲಿದ್ದಾರೆ. ಹೋದ ವರ್ಷವೂ ಇದೇ ಎದುರಾಳಿಯನ್ನು ಕೊಠಾರಿ ಸೋಲಿಸಿದ್ದರು. 

ಮತ್ತೊಂದು ಸೆಮಿಫೈನಲ್‌ ಹಣಾಹಣಿಯಲ್ಲಿ ಗಿಲ್‌ಕ್ರಿಸ್ಟ್‌, ಡೇವಿಡ್‌ ಕಾಸಿಯರ್‌ ಅವರನ್ನು 1183–1023ರಿಂದ ಮಣಿಸಿದರು.

Post Comments (+)