ಬುಧವಾರ, ನವೆಂಬರ್ 20, 2019
25 °C

ಬಾಕ್ಸಿಂಗ್‌: ಪದಕದ ಮೇಲೆ ಭಾರತದ ಸ್ಪರ್ಧಿಗಳ ಕಣ್ಣು

Published:
Updated:

ಏಕ್ತರಿನ್‌ಬರ್ಗ್‌, ರಷ್ಯಾ: ಭಾರತದ ಸ್ಪರ್ಧಿಗಳು ಸೋಮವಾರದಿಂದ ಇಲ್ಲಿ ಆರಂಭವಾಗಲಿರುವ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಪದಕಗಳಿಗೆ ‘ಪಂಚ್‌’ ಮಾಡಲು ಕಾತರರಾಗಿದ್ದಾರೆ.

ಏಷ್ಯನ್‌ ಚಾಂಪಿಯನ್‌ ಅಮಿತ್‌ ಪಂಗಲ್‌ 52 ಕೆ.ಜಿ. ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ. ಎರಡನೇ ಶ್ರೇಯಾಂಕ ಹೊಂದಿರುವ ಅವರಿಗೆ ಮೊದಲ ಸುತ್ತಿನಲ್ಲಿ ‘ಬೈ’ ಲಭಿಸಿದೆ.

ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕಗಳನ್ನು ಜಯಿಸಿರುವ ಕವಿಂದರ್‌ ಸಿಂಗ್‌ ಬಿಷ್ಠ್‌ (57 ಕೆ.ಜಿ) ಮತ್ತು ಆಶಿಶ್‌ ಕುಮಾರ್‌ (75 ಕೆ.ಜಿ) ಅವರಿಗೂ ಆರಂಭಿಕ ಸುತ್ತಿನಲ್ಲಿ ‘ಬೈ’ ಸಿಕ್ಕಿದೆ.

ಆಶಿಶ್‌ ಮತ್ತು ಸಂಜೀತ್ (91 ಕೆ.ಜಿ) ಅವರು ಮೊದಲ ಸಲ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯುತ್ತಿದ್ದಾರೆ.

ಮನೀಷ್‌ ಕೌಶಿಕ್‌ (63 ಕೆ.ಜಿ.), ದುರ್ಯೋಧನ ಸಿಂಗ್‌ ನೇಗಿ (69 ಕೆ.ಜಿ), ಬ್ರಿಜೇಶ್‌ ಯಾದವ್‌ (81 ಕೆ.ಜಿ) ಮತ್ತು ಸತೀಶ್‌ ಕುಮಾರ್‌ (+91 ಕೆ.ಜಿ) ಅವರೂ ಪದಕದ ಭರವಸೆಯಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)