ಬಳ್ಳಾರಿಯಲ್ಲಿ ವಿಶ್ವದರ್ಜೆಯ ಕ್ರೀಡಾ ತರಬೇತಿ!

7
ಜೆಎಎಸ್‌ಡಬ್ಲ್ಯುನಲ್ಲಿ ಇನ್‌ಸ್ಪೈರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೋರ್ಟ್ಸ್‌

ಬಳ್ಳಾರಿಯಲ್ಲಿ ವಿಶ್ವದರ್ಜೆಯ ಕ್ರೀಡಾ ತರಬೇತಿ!

Published:
Updated:
Deccan Herald

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲ್ಲೂಕಿನಲ್ಲಿರುವ ವಿಜಯನಗರದಲ್ಲಿ ಜೆಎಸ್‌ಡಬ್ಲ್ಯು ಸಂಸ್ಥೆಯು ಇನ್‌ಸ್ಪೈರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೋರ್ಟ್ಸ್‌ ಸ್ಥಾಪಿಸಿದ್ದು, ದೇಶದ ವಿವಿಧೆಡೆಯ 99 ಮಂದಿಗೆ ವಿಶ್ವದರ್ಜೆಯ ತರಬೇತಿಯನ್ನು ನೀಡಲಾಗುತ್ತಿದೆ.

‘ಪ್ರಮುಖ ಒಲಿಂಪಿಕ್‌ ಕ್ರೀಡೆಗಳಾದ ಬಾಕ್ಸಿಂಗ್‌, ಜೂಡೊ, ಕುಸ್ತಿ ತರಬೇತಿಯನ್ನು ಒಂದು ವರ್ಷದಿಂದ ನೀಡಲಾಗುತ್ತಿದೆ. ಎಫ್‌ಐಎನ್‌ಎ ಅಂಗೀಕಾರ ನೀಡಿರುವ ಈಜು ತರಬೇತಿ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, 2019ರ ವೇಳೆಗೆ ಕಾರ್ಯಾರಂಭ ಮಾಡಲಿದೆ’ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಕ್ಷಿಣ ಆಫ್ರಿಕಾ ಮೂಲದ ರಶ್ದೀ ವಾರ್ಲೆ ತಿಳಿಸಿದರು.

ಇನ್‌ಸ್ಟಿಟ್ಯೂಟ್‌ನಲ್ಲಿ ಗುರುವಾರ ಸುದ್ದಿಗಾರರಿಗೆ ಏರ್ಪಡಿಸಿದ್ದ ಪರಿಚಯ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾಲ್ಕು ವರ್ಷಗಳ ಹಿಂದೆ ಸಂಸ್ಥೆಯನ್ನು ಅಭಿವೃದ್ಧಿಪಡಿಸಿ, 2017ರಿಂದ ತರಬೇತಿಯನ್ನು ನೀಡಲಾಗುತ್ತಿದೆ. ಇತ್ತೀಚೆಗಷ್ಟೇ ಟ್ರ್ಯಾಕ್‌ ಅಂಡ್‌ ಫೀಲ್ಡ್‌ ಅನ್ನು ಪರಿಚಯಿಸಲಾಗಿದ್ದು, ಅಥ್ಲೆಟಿಕ್ಸ್‌ನ ಹೊಸ ವಿಭಾಗಗಳನ್ನು ಆರಂಭಿಸಲಾಗುವುದು’ ಎಂದರು.

ಆಯ್ಕೆ ಹೇಗೆ: ದೇಶದ ವಿವಿಧೆಡೆ ನಡೆಯುವ ಉನ್ನತ ಮಟ್ಟದ ಕ್ರೀಡಾಕೂಟಗಳಿಗೆ ಭೇಟಿ ನೀಡುವ ಇನ್‌ಸ್ಟಿಟ್ಯೂಟ್‌ನ ತರಬೇತುದಾರರು ಅಲ್ಲಿ ಪ್ರತಿಭಾವಂತರನ್ನು ಗುರುತಿಸಿ ಆಯ್ಕೆ ಮಾಡುತ್ತಾರೆ. ಸಂಸ್ಥೆಗೆ ಸೇರಿದ ಬಳಿಕ ಅವರಿಗೆ ವಿದ್ಯಾರ್ಥಿ ವೇತನದೊಂದಿಗೆ ವಸತಿ, ತರಬೇತಿ ಮತ್ತು ಶಿಕ್ಷಣವನ್ನು ಉಚಿತವಾಗಿ ನೀಡಲಾಗುವುದು’ ಎಂದರು.

‘ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಪದಕ ವಿಜೇತರಾದ ನೀರಜ್‌ ಚೋಪ್ರಾ, ವಿಕಾಸ್‌ ಕೃಷ್ನನ್‌ ಯಾದವ್‌ ಮತ್ತು ವಿನೇಶ್‌ ಫೊಗತ್‌, ರಿಯೋ ಕಂಚು ಪದಕ ವಿಜೇತರಾದ ಸಾಕ್ಷಿ ಮಲಿಕ್‌, ಯುವ ಅಥ್ಲೀಟ್‌ಗಳಾದ ಬಾಕ್ಸರ್‌ ನಿಖರ್‌ ಝರೇನ್‌, ಎತ್ತರ ಜಿಗಿತ ಪಟು ತೇಜಸ್ವಿನ್‌ ಶಂಕರ್‌ ಇಲ್ಲಿ ತರಬೇತಿ ಪಡೆದಿದ್ದಾರೆ’ ಎಂದು ಮಾಹಿತಿ ನೀಡಿದರು.

’ಭಾರತದೊಂದಿಗೆ ಜೋಜೋ, ಫ್ರಾನ್ಸ್‌, ರಷ್ಯಾ, ಅಮೆರಿಕಾ, ಇಸ್ರೇಲ್‌, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌ನ ತರಬೇತುದಾರರು ಇಲ್ಲಿಯೇ ಇದ್ದು ತರಬೇತಿ ನೀಡುತ್ತಿದ್ದಾರೆ’ ಎಂದರು.

ಸಂಸ್ಥೆಯ ಕಾರ್ಪೊರೇಟ್‌ ಸಾಮಾಜಿಕ ಜವಾಬ್ದಾರಿ ನಿಧಿಯಿಂದ, 20 ಕಾರ್ಪೊರೇಟ್‌ ದಾನಿ ಸಂಸ್ಥೆಗಳ ನೆರವಿನೊಂದಿಗೆ ಆರಂಭವಾಗಿರುವ ಈ ಇನ್‌ಸ್ಟಿಟ್ಯೂಟ್‌ ಆ.15ರಂದು ಉದ್ಘಾಟನೆಗೊಂಡಿತ್ತು.

 

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !