ಗುರುವಾರ , ನವೆಂಬರ್ 21, 2019
26 °C
ಗ್ರೀಸ್‌ ವಿರುದ್ಧ ಜಯ

ಬ್ಯಾಸ್ಕೆಟ್‌ಬಾಲ್‌: ಎಂಟರ ಘಟ್ಟಕ್ಕೆ ಅಮೆರಿಕ

Published:
Updated:

ಶೆನ್‌ಝೆನ್‌: ಕಳೆದ ಬಾರಿಯ ಚಾಂಪಿಯನ್‌ ಅಮೆರಿಕ ತಂಡ ಶನಿವಾರ 69–53 ಪಾಯಿಂಟ್‌ಗಳಿಂದ ಗ್ರೀಸ್‌ ತಂಡವನ್ನು ಸೋಲಿಸಿ ಬ್ಯಾಸ್ಕೆಟ್‌ಬಾಲ್‌ ವಿಶ್ವಕಪ್‌ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿತು. 

ಎನ್‌ಬಿಎ ಆಟಗಾರ ಗಿಯಾನಿಸ್‌ ಆಂಟೆಟೊಕೊನ್‌ಪೊ ಅವರನ್ನು ನಿಯಂತ್ರಿಸಿದರೆ, ಗ್ರೀಸ್‌ ತಂಡವನ್ನೂ ಮಣಿಸಬಹುದು ಎಂಬ ಲೆಕ್ಕಾಚಾರದಲ್ಲೇ ಆಡಿದ ಅಮೆರಿಕ ಯಶಸ್ಸನ್ನೂ ಕಂಡಿತು. 24 ವರ್ಷದ ಗಿಯಾನಿಸ್‌ ಹೆಚ್ಚು ದಾಳಿ ನಡೆಸದಂತೆ ಮೂವರು ಆಟಗಾರರು ಸರ್ಪಗಾವಲು ಹಾಕಿದರು.

ಆಸ್ಟ್ರೇಲಿಯಾ ಮತ್ತು ಫ್ರಾನ್ಸ್‌ ತಂಡಗಳೂ ಸೆಮಿಫೈನಲ್‌ ಪ್ರವೇಶಿಸಿವೆ. ಆದರೆ ಗ್ರೀಸ್‌ ಬಾಗಿಲು ಪೂರ್ಣ ಮುಚ್ಚಿಲ್ಲ.   ಸೋಮವಾರ ಜೆಕ್‌ ರಿಪಬ್ಲಿಕ್‌ ವಿರುದ್ಧ ದೊಡ್ಡ ಅಂತರದ ಜಯಗಳಿಸಿದಲ್ಲಿ ಅದೂ ಎಂಟರ ಘಟ್ಟ ತಲುಪಬಹುದು.

 

ಪ್ರತಿಕ್ರಿಯಿಸಿ (+)