ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಮಹಿಳಾ ಬಾಕ್ಸಿಂಗ್‌: ಪ್ರೀ ಕ್ವಾರ್ಟರ್‌ಗೆ ಜಮುನಾ

Last Updated 4 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಉಲಾನ್‌ ಉದೆ, ರಷ್ಯಾ: ಭಾರತದ ಜಮುನಾ ಬೋರೊ ಅವರು ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ 54 ಕೆ.ಜಿ. ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಜಮುನಾ 5–0 ಪಾಯಿಂಟ್ಸ್‌ನಿಂದ ಮಂಗೋಲಿಯಾದ ಮಿಚಿದ್ಮಾ ಎರ್ಡೆನೆಡಲಾಯ್‌ ಎದುರು ಗೆದ್ದರು.

22ರ ಹರೆಯದ ಜಮುನಾ, ಕೊನೆಯ ಮೂರು ನಿಮಿಷಗಳಲ್ಲಿ ಎದುರಾಳಿಯ ಮೇಲೆ ಪ್ರಹಾರ ನಡೆಸಿ ಪಾಯಿಂಟ್ಸ್‌ ಕಲೆಹಾಕಿದರು.

ಮುಂದಿನ ಸುತ್ತಿನಲ್ಲಿ ಭಾರತದ ಬಾಕ್ಸರ್‌ಗೆ ಅಲ್ಜೀರಿಯಾದ ಒಯುದಾದ್‌ ಸಫೌಹ್‌ ಅವರ ಸವಾಲು ಎದುರಾಗಲಿದೆ.

ಇಲ್ಲಿ ಐದನೇ ಶ್ರೇಯಾಂಕ ಪಡೆದಿರುವ ಒಯುದಾದ್‌, 2017ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಮೊದಲ ಸುತ್ತಿನಲ್ಲಿ ಅವರಿಗೆ ‘ಬೈ’ ಸಿಕ್ಕಿದೆ.

ಶನಿವಾರ ನಡೆಯುವ ಪಂದ್ಯಗಳಲ್ಲಿ ನೀರಜಾ (57 ಕೆ.ಜಿ) ಮತ್ತು ಸವೀತಿ ಬೂರಾ (75 ಕೆ.ಜಿ) ಅವರು ರಿಂಗ್‌ಗೆ ಇಳಿಯಲಿದ್ದಾರೆ.

ನೀರಜಾ ಅವರು ಚೀನಾದ ಕ್ವಿಯಾವೊ ಜಿಯೆರು ಎದುರೂ, ಸವೀತಿ ಅವರು ಮಂಗೋಲಿಯಾದ ಮ್ಯಾಗ್‌ ಮರ್ಜರ್‌ಗಲ್‌ ಮುಂಕ್‌ಬತ್‌ ವಿರುದ್ಧವೂ ಪೈಪೋಟಿ ನಡೆಸಲಿದ್ದಾರೆ.

ಚಾಂಪಿಯನ್‌ಷಿಪ್‌ನಲ್ಲಿ 57 ದೇಶಗಳ ಒಟ್ಟು 224 ಬಾಕ್ಸರ್‌ಗಳು ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT