ಸೋಮವಾರ, ನವೆಂಬರ್ 18, 2019
20 °C

ಸಾಜನ್‌ ಕೈಗೆಟುಕದ ಕಂಚು

Published:
Updated:

ಬುಡಾಪೆಸ್ಟ್‌: ಭಾರತದ ಸಾಜನ್‌ ಭಾನಾವಾಲಾ ಇಲ್ಲಿ ನಡೆಯುತ್ತಿರುವ 23 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆಲ್ಲಲು ವಿಫಲರಾದರು.

ಭಾನುವಾರ ನಡೆದ ಪುರುಷರ 77 ಕೆ.ಜಿ.ವಿಭಾಗದ ಕಂಚಿನ ಪದಕದ ಪೈಪೋಟಿಯಲ್ಲಿ ಸಾಜನ್‌ 1–10 ಪಾಯಿಂಟ್ಸ್‌ನಿಂದ ಟರ್ಕಿಯ ಸೆರ್ಕನ್‌ ಅಕ್ಕೊಯುನ್‌ ಎದುರು ಮಣಿದರು. 

ರೆಪೆಚೆಜ್‌ ಸುತ್ತಿಗೆ ರವಿ: 97 ಕೆ.ಜಿ.ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ರವಿ 0–8ರಿಂದ ಜಾರ್ಜಿಯಾದ ಜಿಯೊರ್ಜಿ ಮೆಲಿಯಾ ಎದುರು ಸೋತರು.

ಮೆಲಿಯಾ ಅವರು ಫೈನಲ್‌ ಪ್ರವೇಶಿಸಿದ್ದರಿಂದ ಭಾರತದ ಕುಸ್ತಿಪಟುಗೆ ರೆಪೆಚೆಜ್‌ ಸುತ್ತಿನಲ್ಲಿ ಸೆಣಸುವ ಅವಕಾಶ ಲಭಿಸಿತು.

55 ಕೆ.ಜಿ.ವಿಭಾಗದ ರೆಪೆಚೆಜ್‌ ಸುತ್ತಿನಲ್ಲಿ ಅಖಾಡಕ್ಕೆ ಇಳಿದಿದ್ದ ಕರ್ನಾಟಕದ ಅರ್ಜುನ್‌ ಹಲಕುರ್ಕಿ 2–10 ಪಾಯಿಂಟ್ಸ್‌ನಿಂದ ಅರ್ಮೇನಿಯಾದ ನೊರಯರ್‌ ಹಖೋಯನ್‌ ಎದುರು ಪರಾಭವಗೊಂಡರು.

87 ಕೆ.ಜಿ.ವಿಭಾಗದ ರೆಪೆಚೆಜ್‌ ಸುತ್ತಿನ ಎರಡನೇ ಪೈಪೋಟಿಯಲ್ಲಿ ಸುನಿಲ್‌ ಕುಮಾರ್‌ 3–6ರಲ್ಲಿ ಕ್ರೊವೇಷ್ಯಾದ ಇವಾನ್‌ ಹುಕ್ಲೆಕ್‌ ಎದುರು ಸೋತರು. ಇದಕ್ಕೂ ಮೊದಲು ನಡೆದಿದ್ದ ಪಂದ್ಯದಲ್ಲಿ ಸುನಿಲ್‌ 5–3ರಿಂದ ಸ್ವೀಡನ್‌ನ ಅಲೆಕ್ಸಾಂಡರ್‌ ಜಿಯೊರ್ಜಿಜ್‌ ಎದುರು ವಿಜಯಿಯಾಗಿದ್ದರು.

60 ಕೆ.ಜಿ.ವಿಭಾಗದ ಅರ್ಹತಾ ಸುತ್ತಿನ ಪೈಪೋಟಿಯಲ್ಲಿ ಸಚಿನ್‌ ರಾಣಾ 2–5 ರಿಂದ ಚೀನಾದ ಲಿಗುವೊ ಕಾವೊ ಎದುರೂ, 72 ಕೆ.ಜಿ.ವಿಭಾಗದ ಪಂದ್ಯದಲ್ಲಿ ರಾಹುಲ್‌ 0–8ರಿಂದ ರಷ್ಯಾದ ಮಗೊಮೆದ್‌ ಯರಬಿಲೊವ್‌ ಮೇಲೂ 82 ಕೆ.ಜಿ.ವಿಭಾಗದ ಹಣಾಹಣಿಯಲ್ಲಿ ನೀರಜ್‌ 1–10ರಿಂದ ಸರ್ಬಿಯಾದ ಬ್ರಾಂಕೊ ಕೊವಾಸೆವಿಚ್‌ ವಿರುದ್ಧವೂ ಪರಾಭವಗೊಂಡರು.

67 ಕೆ.ಜಿ.ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ರವಿಂದರ್‌ 1–2 ಪಾಯಿಂಟ್ಸ್‌ನಿಂದ ಟರ್ಕಿಯ ಹಕಿ ಕರಕುಸ್‌ ಎದುರು ಮಣಿದರು.

ಪ್ರತಿಕ್ರಿಯಿಸಿ (+)