ಸೋಮವಾರ, ಅಕ್ಟೋಬರ್ 21, 2019
23 °C

ವಿಶ್ವ ಯುವ ಚೆಸ್‌: ಪ್ರಗ್ನಾನಂದ ಮುನ್ನಡೆ

Published:
Updated:

ಮುಂಬೈ: ಆತಿಥೇಯ ಭಾರತದ ಆಟಗಾರರು, ವಿಶ್ವ ಯುವ ಚೆಸ್‌ ಚಾಂಪಿಯನ್‌ಷಿಪ್‌ನ ಅಂತಿಮ ದಿನವಾದ ಶನಿವಾರ ಕೆಲವು ಪದಕಗಳನ್ನು ಗೆಲ್ಲುವುದು ಖಚಿತವಾಗಿದೆ. ಗ್ರ್ಯಾಂಡ್‌ಮಾಸ್ಟರ್‌ ಆರ್‌.ಪ್ರಗ್ನಾನಂದ 18 ವರ್ಷದೊಳಗಿನವರ ಓಪನ್‌ ವಿಭಾಗದಲ್ಲಿ ಚಿನ್ನ ಗೆಲ್ಲುವ ಹಾದಿಯಲ್ಲಿದ್ದಾರೆ.

ಡಬ್ಲ್ಯುಐಎಂ ವಂತಿಕಾ ಅಗರವಾಲ್‌ (18 ವರ್ಷದೊಳಗಿನ ಬಾಲಕಿಯರು), ಕ್ಯಾಂಡಿಡೇಟ್‌ ಮಾಸ್ಟರ್‌ ಅರಣ್ಯಕ್ ಘೋಷ್‌ (16 ವರ್ಷದೊಳಗಿನವರ ಓಪನ್‌ ವಿಭಾಗ), ಎಲ್‌.ಆರ್‌.ಶ್ರೀಹರಿ (14 ವರ್ಷದೊಳಗಿನವರ ಓಪನ್‌) ತಮ್ಮ ವಯೋವರ್ಗಗಳಲ್ಲಿ ಉತ್ತಮ ಸ್ಥಿತಿಯಲ್ಲಿದ್ದು ಬೆಳ್ಳಿಯ ಪದಕದ ಅವಕಾಶ ಹೊಂದಿದ್ದಾರೆ.

ಪ್ರಗ್ನಾನಂದ, ಶುಕ್ರವಾರ ನಡೆದ 10ನೇ ಸುತ್ತಿನಲ್ಲಿ ಲಿಥುವೇನಿಯಾದ ಐಎಂ ಪೌಲಿಸ್‌ ಪುಲ್ಟಿನೆವಿಸಿಯಸ್‌ ಅವರನ್ನು ಸೋಲಿಸಿ ಒಟ್ಟು 8.5 ಅಂಕ ಸಂಗ್ರಹಿಸಿದ್ದಾರೆ. ಅವರು ಎರಡನೇ ಸ್ಥಾನ ಪಡೆದ ಅರ್ಮೇನಿಯಾದ ಜಿಎಂ ಶಂತ್‌ ಸರ್ಗಸ್ಯಾನ್‌ ಅವರಿಗಿಂತ  ಅರ್ಧ ಪಾಯಿಂಟ್‌ ಮುಂದಿದ್ದಾರೆ. ಶನಿವಾರ ಆಂತಿಮ ಸುತ್ತಿನ ಪಂದ್ಯಗಳು ನಡೆಯಲಿವೆ. 

 

Post Comments (+)