ಗುರುವಾರ , ಆಗಸ್ಟ್ 5, 2021
21 °C

ಜಗತ್ತಿನ ಮೊದಲ ಆನ್‌ಲೈನ್‌ ಶೂಟಿಂಗ್‌ ಲೀಗ್‌: ಹುಬ್ಬಳ್ಳಿಯ ಜ್ಯೋತಿಗೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೊರೊನಾ ಸೋಂಕಿನ ಕಾರಣ ಜಗತ್ತಿನಲ್ಲಿ ಮೊದಲ ಬಾರಿಗೆ ಆನ್‌ಲೈನ್‌ ಮೂಲಕ ಶೂಟಿಂಗ್‌ ಲೀಗ್‌ ಆಯೋಜಿಸಲಾಗಿದ್ದು, ಭಾರತ ಪ್ಯಾರಾ ತಂಡದಲ್ಲಿ ಹುಬ್ಬಳ್ಳಿಯ ಜ್ಯೋತಿ ಸಣ್ಣಕ್ಕಿ ಅವಕಾಶ ಪಡೆದಿದ್ದಾರೆ.

ಈ‌ ಮೊದಲು ಅನೇಕ ಆನ್‌ಲೈನ್‌ ಶೂಟಿಂಗ್ ಟೂರ್ನಿಗಳು ನಡೆದಿವೆ. ಆದರೆ, ಅನ್‌ಲೈನ್ ಲೀಗ್ ಆಯೋಜ‌ನೆಯಾಗಿದ್ದು ಇದೇ ಮೊದಲು.

ಟೂರ್ನಿಯಲ್ಲಿ ಇಂಡಿಯನ್‌ ಟೈಗರ್ಸ್‌, ಇಟಲಿಯನ್‌ ಸ್ಟೈಲ್‌, ಆಸ್ಟ್ರಿಯನ್‌ ರಾಕ್ಸ್‌, ಫ್ರೆಂಚ್‌ ಫ್ರಾಗ್ಸ್‌, ಇಸ್ರೇಲ್‌ ಮಾಬರುತ್‌ ಮತ್ತು ಸ್ಪ್ಯಾನಿಷ್‌ ಚನೊಸ್‌ ತಂಡಗಳು ಪಾಲ್ಗೊಂಡಿವೆ. ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಇಟಾಲಿಯನ್‌ ತಂಡದ ಮಾರ್ಕೊ ಸುಪ್ಪಿನಿ ಕೂಡ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ.

ಹುಬ್ಬಳ್ಳಿಯ ಶೂಟರ್‌

ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪ್ಯಾರಾ ಶೂಟಿಂಗ್‌ ಚಾಂಪಿಯನ್‌ಷಿಪ್‌ಗಳಲ್ಲಿ ಪದಕಗಳನ್ನು ಜಯಿಸಿರುವ ಜ್ಯೋತಿ, ಆನ್‌ಲೈನ್‌ ಲೀಗ್‌ನಲ್ಲಿ ಭಾನುವಾರ ಮಧ್ಯಾಹ್ನ ಭಾರತ ಟೈಗರ್ಸ್‌ ತಂಡದಲ್ಲಿ ಆಡಿದರು.

ಜ್ಯೋತಿ, ಹುಬ್ವಳ್ಳಿ ಸ್ಪೋರ್ಟ್ಸ್‌ ಶೂಟಿಂಗ್ ಅಕಾಡೆಮಿಯಲ್ಲಿ ರವಿಚಂದ್ರ ಬಾಲೆಹೊಸುರ ಬಳಿ ತರಬೇತಿ ಪಡೆಯುತ್ತಿದ್ದಾರೆ. ಈ ಅಕಾಡೆಮಿಯಿಂದಲೇ ಅವರು ಪಂದ್ಯವಾಡಿದರು. ಬೇರೆ, ಬೇರೆ ಊರುಗಳಲ್ಲಿರುವ ಸಂಘಟಕರು ನೀಡುವ ಸೂಚನೆಗಳನ್ನು ಪಾಲಿಸಿ ಶೂಟರ್‌ಗಳು ತಮ್ಮೂರಿನಿಂದಲೇ ಶೂಟಿಂಗ್ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಹುಬ್ಬಳ್ಳಿಯ ಶೂಟರ್‌ ಕೇರಳದ ತಿರುವನಂತಪುರದಲ್ಲಿ 2018ರಲ್ಲಿ ನಡೆದಿದ್ದ 62ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌ನ ಎಸ್‌ಎಚ್‌–1 ವಿಭಾಗದ 10 ಮೀಟರ್‌ ಏರ್ ರೈಫಲ್‌ ಸ್ಟ್ಯಾಂಡಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು