ಕುಸ್ತಿ: ಮಹಾರಥಿ ಶುಭಾರಂಭ

7

ಕುಸ್ತಿ: ಮಹಾರಥಿ ಶುಭಾರಂಭ

Published:
Updated:

ಪಂಚಕುಲ: ಇಬ್ರಾಹಿಂ ಇಲಿಯಾಸೊವ್‌ ಗಳಿಸಿಕೊಟ್ಟ ಮೊದಲ ಜಯದ ಸಂಭ್ರಮದಲ್ಲಿ ಉತ್ತಮ ಪಟ್ಟುಗಳನ್ನು ಹಾಕಿದ ಮುಂಬೈ ಮಹಾರಥಿ ತಂಡದವರು ಪ್ರೊ ಕುಸ್ತಿ ಲೀಗ್‌ನಲ್ಲಿ ಶುಭಾರಂಭ ಮಾಡಿದರು.

ಇಲ್ಲಿ ಸೋಮವಾರ ಆರಂಭಗೊಂಡ ಲೀಗ್‌ನ ಮೊದಲ ಹಣಾಹಣಿಯಲ್ಲಿ ಮಹಾರಥಿ, 4–3ರಲ್ಲಿ ಎನ್‌ಸಿಆರ್ ಪಂಜಾಬ್ ರಾಯಲ್ಸ್ ವಿರುದ್ಧ ಗೆಲುವು ಸಾಧಿಸಿತು.

57 ಕೆಜಿ ವಿಭಾಗದ ಮೊದಲ ಪಂದ್ಯದಲ್ಲಿ ಇಬ್ರಾಹಿಂ ಇಲಿಯಾಸೊವ್‌ ರಾಯಲ್ಸ್‌ನ ನಿತಿನ್ ರಾಠಿ ಎದುರು ಗೆದ್ದರು. ಮುಂದಿನ ಪಂದ್ಯದಲ್ಲಿ ಮಿಮಿ ಹಿಸ್ಟೋವ ಅವರು ಬೆಟ್ಜಾಬೆತ್ ಏಂಜೆಲಿಕಾ ಎದುರು ಗೆಲುವು ಸಾಧಿಸಿ ತಿರುಗೇಟು ನೀಡಿದರು.

ನಂತರದ ಎರಡು ಪಂದ್ಯಗಳಲ್ಲಿ ಮಹಾರಥಿ ಪೈಲ್ವಾನರು ಗೆದ್ದರು. ಅಮಿತ್ ಧನ್ಕಾರ್‌ ವಿರುದ್ಧ ಸಚಿನ್ ರಾಠಿ, ವೆಸ್ಕಾನ್ ಸಿಂಥಿಯಾ ವಿರುದ್ಧ ನೆಮೆತ್ ಗೆದ್ದರು. ದೀಪಕ್ ಪೂನಿಯಾ ಅವರನ್ನು ಮಣಿಸಿ ಮರ್ಸಾಗಿಶಿವ್ಲಿ, ರಾಯಲ್ಸ್‌ಗೆ ಎರಡನೇ ಜಯ ತಂದುಕೊಟ್ಟರು. ನಿರ್ಣಾಯಕ ಪಂದ್ಯದಲ್ಲಿ ಅಂಜು ವಿರುದ್ಧ ಗೆದ್ದ ವಿನೇಶಾ ಪೋಗಟ್ ಅವರು ಮಹಾರಥಿಯ ಜಯವನ್ನು ಖಚಿತಪಡಿಸಿಕೊಂಡರು. ಕೊನೆಯ ಪಂದ್ಯದಲ್ಲಿ ರಾಯಲ್ಸ್‌ನ ಬಜರಂಗ್ ಪೂನಿಯಾ ಅವರ ಹರಫೂಲ್ ಎದುರು ಗೆದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !