ಶುಕ್ರವಾರ, ನವೆಂಬರ್ 15, 2019
26 °C

20ರಂದು ಕುಸ್ತಿ ಟ್ರಯಲ್ಸ್‌

Published:
Updated:

ಬೆಂಗಳೂರು: ಮುಂಬರುವ ರಾಷ್ಟ್ರೀಯ ಸೀನಿಯರ್‌ ಕುಸ್ತಿ ಚಾಂಪಿಯನ್‌ಷಿಪ್‌ಗೆ ಕರ್ನಾಟಕದ ಪುರುಷರ ಫ್ರೀಸ್ಟೈಲ್‌ ಮತ್ತು ಗ್ರೀಕೊ ರೋಮನ್‌ ಹಾಗೂ ಮಹಿಳಾ ತಂಡಗಳನ್ನು ಆಯ್ಕೆ ಮಾಡುವ ಸಲುವಾಗಿ ಕರ್ನಾಟಕ ಕುಸ್ತಿ ಸಂಸ್ಥೆಯು ಇದೇ ತಿಂಗಳ 20 ರಂದು ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ್‌ ಪೆವಿಲಿಯನ್‌ನಲ್ಲಿ ಟ್ರಯಲ್ಸ್‌ ನಡೆಸಲು ನಿರ್ಧರಿಸಿದೆ.

ರಾಷ್ಟ್ರೀಯ ಚಾಂಪಿಯನ್‌ಷಿಪ್‌, ನವೆಂಬರ್‌ 28ರಿಂದ ಡಿಸೆಂಬರ್‌ 1ರವರೆಗೆ ಪಂಜಾಬ್‌ನ ಜಲಂದರ್‌ನಲ್ಲಿ ನಡೆಯಲಿದೆ.

ಡಬ್ಲ್ಯು.ಎಫ್‌.ಐ ಮತ್ತು ಯು.ಡಬ್ಲ್ಯು.ಡಬ್ಲ್ಯು ನಿಯಮಗಳ ಅನುಸಾರ ಟ್ರಯಲ್ಸ್‌ ನಡೆಸಲಾಗುತ್ತದೆ.

ಟ್ರಯಲ್ಸ್‌ ನಡೆಯುವ ವಿಭಾಗಗಳು
ಪುರುಷರ ಫ್ರೀಸ್ಟೈಲ್‌: (57, 61, 65, 70, 74, 79, 86, 92, 97 ಮತ್ತು 125 ಕೆ.ಜಿ).
ಪುರುಷರ ಗ್ರೀಕೊ ರೋಮನ್‌: (55, 60, 63, 67, 72, 77, 82, 87, 97 ಮತ್ತು 130 ಕೆ.ಜಿ).
ಮಹಿಳೆಯರು: (50, 53, 55, 57, 59, 62, 65, 68, 72 ಮತ್ತು 76 ಕೆ.ಜಿ).

ಹೆಚ್ಚಿನ ಮಾಹಿತಿಗೆ ಕೋಚ್‌ಗಳಾದ ರಮೇಶ್‌ (ಮೊ:7019909528) ಮತ್ತು ವಿನೋದ್‌ ಕುಮಾರ್‌ (ಮೊ: 8971388143) ಅವರನ್ನು ಸಂಪರ್ಕಿಸಬಹುದು.

ಪ್ರತಿಕ್ರಿಯಿಸಿ (+)