ಬುಧವಾರ, ನವೆಂಬರ್ 20, 2019
22 °C

ರೆಬೆಕಾಗೆ ಜಿಯಾಂಗ್‌ಕ್ಸಿ ಗರಿ

Published:
Updated:
Prajavani

ನ್ಯಾನ್‌ಚಾಂಗ್‌, ಚೀನಾ (ರಾಯಿಟರ್ಸ್‌): ಸ್ವೀಡನ್‌ನ ರೆಬೆಕ್ಕಾ ಪೀಟರ್‌ಸನ್‌ ಮೊದಲ ಬಾರಿ ಡಬ್ಲ್ಯುಟಿಎ ಟೆನಿಸ್‌ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಭಾನುವಾರ ಇಲ್ಲಿ ನಡೆದ ಜಿಯಾಂಗ್‌ಕ್ಸಿ ಓಪನ್‌ ಫೈನಲ್‌ ಪಂದ್ಯದಲ್ಲಿ ಅವರು ಕಜಕಿಸ್ತಾನ ಆಟಗಾರ್ತಿ ಎಲೆನಾ ರಿಬಾಕಿನಾ ಎದುರು 6–2, 6–0 ಸೆಟ್‌ಗಳಿಂದ ಗೆದ್ದರು.

24 ವರ್ಷದ ರೆಬೆಕ್ಕಾ ಅವರಿಗೆ ಎದುರಾಳಿಯನ್ನು ಸೋಲಿಸಲು ಒಂದು ತಾಸು ಸಾಕಾಯಿತು. ಪಂದ್ಯದಲ್ಲಿ 11 ತಪ್ಪುಗಳನ್ನು ಎಸಗಿದ್ದು ಎಲೆನಾ ಅವರಿಗೆ ಮುಳುವಾಯಿತು. 

ಪ್ರತಿಕ್ರಿಯಿಸಿ (+)