ಶನಿವಾರ, ಜನವರಿ 18, 2020
22 °C

ವುಷು: ರಾಜ್ಯಕ್ಕೆ ನಾಲ್ಕು ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ತಂಡದವರು ರಾಷ್ಟ್ರೀಯ ವುಷು ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕು ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಜಮ್ಮುವಿನಲ್ಲಿ ಡಿಸೆಂಬರ್‌ 26ರಿಂದ 30ರವರೆಗೆ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲಿ ಎಂ. ರಶ್ಮಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರೆ, ಎನ್‌.ಕುಸುಮಾ ಬೆಳ್ಳಿ ಹಾಗೂ ಕಂಚು ಗೆದ್ದರು. ಕಾರ್ತಿಕ್‌ ಕಾಮತ್‌ ಕಂಚಿನ ಪದಕಕ್ಕೆ ಮುತ್ತಿಟ್ಟರು. ಸ್ವಚ್ಛಂದ ಅಷ್ಟೇಕರ್‌ ನಾಲ್ಕನೇ ಸ್ಥಾನ ಗಳಿಸಿದರು.

ಕರ್ನಾಟಕ ವುಷು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಶೋಕ್‌ ಮೊಕಾಶಿ ಹಾಗೂ ಖಜಾಂಚಿ ಸಂಗಮೇಶ್‌ ರಾಜ್ಯ ತಂಡಕ್ಕೆ ಮಾರ್ಗದರ್ಶನ ನೀಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು