ಶುಕ್ರವಾರ, ಮೇ 27, 2022
21 °C
ಏಷ್ಯನ್ ಚಾಂಪಿಯನ್‌ಷಿಪ್ ರ‍್ಯಾಂಕಿಂಗ್ ಸುತ್ತಿನ ಸ್ಪರ್ಧೆಗಳು

ಆರ್ಚರಿ ಏಷ್ಯನ್ ಚಾಂಪಿಯನ್‌ಷಿಪ್: ಮಿನುಗಿದ ರಿಷಭ್ ಯಾದವ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಢಾಕಾ: ಯುವ ಆರ್ಚರಿ ಪಟು ರಿಷಭ್ ಯಾದವ್‌ ಅವರು ಏಷ್ಯನ್‌ ಚಾಂಪಿಯನ್‌ಷಿಪ್‌ನ ರ‍್ಯಾಂಕಿಂಗ್ ಸುತ್ತಿನಲ್ಲಿ ಉತ್ತಮ ಸಾಮರ್ಥ್ಯ ತೋರಿದರು.

ಭಾನುವಾರ ಇಲ್ಲಿಯ ಬನಾನಿ ಆರ್ಮಿ ಕ್ರೀಡಾಂಗಣದಲ್ಲಿ ಚಾಂಪಿಯನ್‌ಷಿಪ್‌ನ ರ‍್ಯಾಂಕಿಂಗ್ ಸುತ್ತುಗಳು ಆರಂಭವಾಗಿದ್ದು, ರಿಷಭ್ ಅವರು ತಮ್ಮ ಮಾರ್ಗದರ್ಶಕ ಅಭಿಷೇಕ್ ವರ್ಮಾ ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನ ಗಳಿಸಿದರು.

ರಿಕರ್ವ್‌ ಮತ್ತು ಕಾಂಪೌಂಡ್‌ ಅರ್ಹತಾ ಸುತ್ತುಗಳ ತಂಡ ಹಾಗೂ ಮಿಶ್ರ ವಿಭಾಗದಲ್ಲಿ ಭಾರತದ ಆರ್ಚರ್‌ಗಳು ಒಟ್ಟಾರೆ ಎರಡನೇ ಸ್ಥಾನ ಗಳಿಸಿದರು. ನಿರೀಕ್ಷೆಯಂತೆ ಕೊರಿಯಾ ಅಗ್ರಸ್ಥಾನ ಗಳಿಸಿತು.

ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿ ಕಣಕ್ಕಿಳಿದಿರುವ 19 ವರ್ಷದ ರಿಷಭ್‌, 708 ಪಾಯಿಂಟ್ಸ್ ಗಳಿಸಿದರು. ಒಂದು ಪಾಯಿಂಟ್‌ನಿಂದ ಅಭಿಷೇಕ್ ವರ್ಮಾ ಅವರನ್ನು ಹಿಂದಿಕ್ಕಿದರು. ಕೊರಿಯಾದ ಚೊಯಿ ಯೊಂಗಿ ಅಗ್ರಸ್ಥಾನ ಗಳಿಸಿದರೆ, ಅದೇ ದೇಶದ ಕಿಮ್ ಜೊಂಗೊ ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು. ಅಭಿಷೇಕ್ ಅವರು ನಾಲ್ಕನೇ ಸ್ಥಾನ ಗಳಿಸಿದರು.

ರಿಷಭ್ 2012ರಿಂದ ಅಭಿಷೇಕ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಮಹಿಳೆಯರ ಕಾಂಪೌಂಡ್‌ ವಿಭಾಗದಲ್ಲಿ, ವಿಶ್ವಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತೆ ಜ್ಯೋತಿ ಸುರೇಖಾ ವೆನ್ನಂ 701 ಪಾಯಿಂಟ್ಸ್ ಗಳಿಸಿ ನಾಲ್ಕನೇ ಸ್ಥಾನ ಗಳಿಸಿದರು. ಈ ವಿಭಾಗದ ಮೊದಲ ಮೂರೂ ಸ್ಥಾನಗಳು ಕೊರಿಯಾ ಆರ್ಚರಿಪಟುಗಳ ಪಾಲಾದವು.

ಕೆಡೆಟ್ ಆರ್ಚರಿಪಟುಗಳಾದ ಪರ್ಣೀತ್ ಕೌರ್, ಪ್ರಿಯಾ ಗುರ್ಜರ್ ಅವರು ಐದು ಮತ್ತು ಆರನೇ ಸ್ಥಾನಗಳನ್ನು ಗಳಿಸಿದರೆ, ಮುಸ್ಕಾನ್ ಕಿರಾರ್ ಏಳನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ರಿಕರ್ವ್ ವಿಭಾಗದಲ್ಲಿ ಕಪಿಲ್‌ (675 ಪಾಯಿಂಟ್ಸ್), ಪ್ರವೀಣ್ ಜಾಧವ್‌ (670), ಹಾಗೂ ಪಾರ್ಥ್‌ ಸಾಳುಂಕೆ (670) ಕ್ರಮವಾಗಿ ಐದು, ಆರು ಮತ್ತು ಏಳನೇ ಸ್ಥಾನ ಗಳಿಸಿದರು.

ವಿಶ್ವ ಯೂತ್ ಚಾಂಪಿಯನ್ ಕೋಮಲಿಕಾ ಬಾರಿ 644 ಪಾಯಿಂಟ್ಸ್‌ನೊಂದಿಗೆ ಎಂಟನೇ ಸ್ಥಾನಕ್ಕೆ ಕುಸಿದು ನಿರಾಸೆ ಮೂಡಿಸಿದರು. ಅಂಕಿತಾ ಭಕತ್, ಮಧು ವೇದ್ವಾನ್‌ ಮತ್ತು ರಿಧಿ  ಐದು, ಆರು ಮತ್ತು ಏಳನೇ ಸ್ಥಾನಗಳನ್ನು ಪಡೆದುಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು