ಭಾನುವಾರ, ಆಗಸ್ಟ್ 18, 2019
24 °C
ಯೋಗಾ ಯೋಗ

ಬೊಜ್ಜು ಮೈ ನಿಯಂತ್ರಣಕ್ಕೆ ಆಸನಗಳು

Published:
Updated:
Prajavani

ಆಹಾರ ಸೇವನೆಯಲ್ಲಿ ಸರಿಯಾದ ಕ್ರಮ ಅನುಸರಿಸದೆ ತಡೆರಹಿತವಾಗಿ ತಿನ್ನುತ್ತಿರುವುದು ಹಾಗೂ ಕುರುಕಲು ತಿಂಡಿಗಳನ್ನೇ ಚಪ್ಪರಿಸುವುದು ಹಲವರಿಗೆ ರೂಢಿಯಾಗಿರುತ್ತದೆ. ಇದರ ಪರಿಣಾಮ ದೇಹದ ಗಾತ್ರ ಮತ್ತು ಆರೋಗ್ಯದ ಮೇಲೂ ಉಂಟಾಗುತ್ತದೆ.

‘ನರಪೇತಲ ನಾರಾಯಣ’, ‘ಒಣಗಿದ ಸಣಕಲು ಕಡ್ಡಿ’ಯಂಗೆ ಇದ್ದೀಯ, ಒಂದಷ್ಟು ಚನ್ನಾಗಿ ತಿಂದುಂಡು ಗುಂಡು ಗುಂಡಾಗಿ ಇರಬಾರದೇ ಎಂದು ಬಡಕಲು ದೇಹದ ಹಾಗೂ ಊಟದ ಬಗ್ಗೆ ಆಲಸ್ಯ ಹೊಂದಿದ ಮಕ್ಕಳಿಗೆ ಸಲಹೆ ನೀಡುತ್ತೇವೆ. ಇನ್ನು ಕೆಲವರಿಗೆ ಈ ಮಾತು ತದ್ವಿರುದ್ಧವಾಗಿ ಹೇಳಬೇಕಾದ ಸ್ಥಿತಿ ಇದೆ.

ಪ್ರಸ್ತುತ ಆಹಾರ ಕ್ರಮ ಹಾಗೂ ವಂಶವಾಹಿಗಳ ಪರಿಣಾಮವಾಗಿ, ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತ ಮುಗಿಸುವ ವೇಳೆಗೆ 60ರಿಂದ 70 ಕೆ.ಜಿ. ತೂಗುವ ದಡೂತಿ ದೇಹದ ಮಕ್ಕಳಿಗೇನು ಕಡಿಮೆ ಇಲ್ಲ. ಜನ ಸಾಮಾನ್ಯರಲ್ಲಿ ಡೊಳ್ಳುಹೊಟ್ಟೆ ಗಣೇಶನಂತಹ ವ್ಯಕ್ತಿಗಳಿಗೇನು ಕೊರತೆಯೇ ಇಲ್ಲ ಬಿಡಿ.

ಕೊಬ್ಬಿನಾಂಶ ದೇಹದಲ್ಲಿ ಹೆಚ್ಚೆಚ್ಚು ಸಂಗ್ರಹಗೊಳ್ಳುತ್ತಾ ಹೋದಂತೆ ದೈಹಿಕ ಚಟುವಟಿಕೆ, ವ್ಯಾಯಾಮಗಳಿಂದ ದೂರ ಉಳಿದವರಲ್ಲಿ ಬೊಜ್ಜು ಹೆಚ್ಚುತ್ತದೆ. ಇದನ್ನು ನಿವಾರಿಸಲು ನೆರವಾಗುವ ಆಸನಗಳ ಪಟ್ಟಿ ಇಲ್ಲಿದೆ.

* ಲಘು ವ್ಯಾಯಾಮ

* ಸೂರ್ಯ ನಮಸ್ಕಾರ(10ರಿಂದ 20 ಸುತ್ತು)

* ಜಠರ ಪರಿವರ್ತನಾಸನ

* ಪರಿಪೂರ್ಣ ನಾವಾಸನ

* ಜಾನು ಶೀರ್ಷಾಸನ, ಪರಿವೃತ್ತ ಜಾನುಶೀರ್ಷಾಸನ

* ಉತ್ತಾನಾಸನ

* ಪಶ್ಚಿಮೋತ್ತಾನಾಸನ

* ಯೋಗನಿದ್ರಾಸನ

* ಧನುರಾಸನ, ಊರ್ಧ್ವಧನುರಾಸನ

* ಶಲಭಾಸನ

* ಮಯೂರಾಸನ

* ಅರ್ಧ ಮತ್ಸ್ಯೇಂದ್ರಾಸನ ಹಾಗೂ ಮುಂದುವರಿದ ಹಂತಗಳು

* ಪಾಶಾಸನ

* ಶೀರ್ಷಾಸನ, ಸರ್ವಾಂಗಾಸನ ಮತ್ತು ಮುಂದುವರಿದ ಹಂತಗಳು

* ತ್ರಿಕೋನಾಸನ ಹಾಗೂ ಉತ್ಥಿತ, ಪರಿವೃತ್ತ, ಪಾರ್ಶ್ವ ಪರಿವೃತ್ತ ತ್ರಿಕೋನಾಸನ

* ಪಾದಾಂಗುಷ್ಠಾಸನ, ಪಾದಹಸ್ತಾಸನ

* ಉಡ್ಡಿಯಾನ ಬಂಧ(ಇದು ಆಸನವಲ್ಲ)

ಹೀಗಿರಲಿ ಅಭ್ಯಾಸ

ಈ ಎಲ್ಲಾ ಆಸನಗಳ ಜತೆ ದೈಹಿಕ ಕಸರತ್ತು ಒದಗಿಸುವ ಕ್ರೀಡೆಗಳಲ್ಲಿ ತೊಡಗಿ. ನಿತ್ಯ ನಾಲ್ಕರಿಂದ 5 ಕಿ.ಮೀ.ನಷ್ಟು ಓಡುವುದರಿಂದ ಬೊಜ್ಜು ಕರಗಿಸಬಹುದು. ಕರಿದ ಪದಾರ್ಥಗಳು ಹಾಗೂ ಹೆಚ್ಚಿನ ಕೊಬ್ಬಿನಾಂಶಯುಕ್ತ ಆಹಾರ ಸೇವನೆಯ ಬಾಯಿ ಚಪಲಕ್ಕೆ ಕಡಿವಾಣ ಹಾಕಿ.

Post Comments (+)