ಶನಿವಾರ, ಜುಲೈ 2, 2022
20 °C

ಜಿಮ್ನಾಸ್ಟಿಕ್ಸ್: ವಿಶ್ವಕಪ್ ಟೂರ್ನಿಗೆ ಪ್ರತಿಷ್ಠಾ

ಪಿಟಿಐ Updated:

ಅಕ್ಷರ ಗಾತ್ರ : | |

ಅಗರ್ತಲಾ: ಯುವ ಜಿಮ್ನಾಸ್ಟ್ ಪ್ರತಿಷ್ಠಾ ಸಮಂತಾ ಅವರು ಈಜಿಪ್ಟ್‌ ಮತ್ತು ಅಜರ್‌ಬೈಜಾನ್‌ನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ದೇಶದ ಆರು ಮಂದಿಯ ತಂಡದಲ್ಲಿ ಪಶ್ಚಿಮ ಬಂಗಾಳದ ಪ್ರತಿಷ್ಠಾ ಕೂಡ ಒಬ್ಬರಾಗಿದ್ದಾರೆ.

18 ವರ್ಷದ ಪ್ರತಿಷ್ಠಾ, 2019ರಲ್ಲಿ ಪುಣೆಯಲ್ಲಿ ನಡೆದ ಖೇಲೊ ಇಂಡಿಯಾ ಯೂತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು.

ವಿಶ್ವಕಪ್ ಟೂರ್ನಿಯು ಇದೇ 17ರಿಂದ 20ರವರೆಗೆ ನಿಗದಿಯಾಗಿದೆ. ಮಾರ್ಚ್‌ 29ರಿಂದ ಏಪ್ರಿಲ್ 1ರವರೆಗೆ ಬಾಕುವಿನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲೂ ಪ್ರತಿಷ್ಠಾ ಸ್ಪರ್ಧಿಸಲಿದ್ದಾರೆ.

45ರಿಂದ 50 ದೇಶಗಳ ಜಿಮ್ನಾಸ್ಟ್‌ಗಳು ವಿಶ್ವಕಪ್‌ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಭಾರತ ತಂಡವು ಸೋಮವಾರ ಕೈರೊಗೆ ಪ್ರಯಾಣ ಬೆಳೆಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು