ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಡ್ರಿಡ್ ಟೆನಿಸ್: ಹಿಂದೆ ಸರಿದ ಸೆರೆನಾ

Last Updated 3 ಮೇ 2018, 19:03 IST
ಅಕ್ಷರ ಗಾತ್ರ

ಪ್ಯಾರಿಸ್ (ಎಎಫ್‌ಪಿ): ಜ್ವರದಿಂದ ಬಳಲುತ್ತಿರುವ ಸೆರೆನಾ ವಿಲಿಯಮ್ಸ್‌ ಅವರು ಮ್ಯಾಡ್ರಿಡ್ ಡಬ್ಲ್ಯುಟಿಎ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಮೇ 7 ರಿಂದ 13ರವರೆಗೆ ಟೂರ್ನಿಯು ನಡೆಯಲಿದೆ.

‘ಅನಾರೋಗ್ಯದ ಕಾರಣ ಈ ಟೂರ್ನಿಯಿಂದ ಹಿಂದೆ ಸರಿಯಬೇಕಾಗಿದೆ. ಅದಕ್ಕಾಗಿ ಬಹಳ ಬೇಸರವಾಗುತ್ತಿದೆ. ಸಂಪೂರ್ಣ ಚೇತರಿಸಿಕೊಂಡ ನಂತರ ಮುಂದಿನ ಟೂರ್ನಿಗಳಲ್ಲಿ ಆಡಲು ಸಿದ್ಧತೆ ನಡೆಸಲಿದ್ದೇನೆ’ ಎಂದು ಸೆರೆನಾ ನೀಡಿರುವ ಹೇಳಿಕೆಯನ್ನು ಟೂರ್ನಿಯ ಆಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

36 ವರ್ಷದ ಸೆರೆನಾ ಅವರು 23 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮೇ 13 ರಿಂದ 20ರವರೆಗೆ ರೋಮ್‌ನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಅವರು ಆಡುವ ನಿರೀಕ್ಷೆ ಇದೆ. ಮೇ 27 ರಿಂದ ಜೂನ್ 10ರವರೆಗೆ ನಡೆಯುವ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಅವರು ಆಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT